ಗರ್ಭಾವಸ್ಥೆಯಲ್ಲೂ ಬೆತ್ತಲೆ ಪೋಸ್ ಕೊಟ್ಟ ಸೆರೆನಾ ವಿಲಿಯಮ್ಸ್
ಬುಧವಾರ, 28 ಜೂನ್ 2017 (10:39 IST)
23 ಬಾರಿ ಗ್ರ್ಯಾನ್ ಸ್ಲ್ಯಾಮ್ ಸಿಂಗಲ್ಸ್ ಗೆದ್ದಿರುವ ಅಮೆರಿಕ ಖ್ಯಾತ ಟೆನ್ನಿಸ್ ತಾರೆ ಸೆರೆನಾ ವಿಲಿಯಮ್ಸ್ ಈಗ ತುಂಬು ಗರ್ಭಿಣಿ. ತಾನು ಗರ್ಭಾವಸ್ಥೆಯಲ್ಲಿರುವ ಬೆತ್ತಲೆ ಫೋಟೊವನ್ನ ವ್ಯಾನಿಟಿ ಪೇರ್ ಮ್ಯಾಗಜಿನ್ ಕವರ್ ಪೇಜ್`ಗೆ ನೀಡಿದ್ದಾಳೆ.
ಬಲಗೈಯಿಂದ ಎದೆಯನ್ನ ಮುಚ್ಚಿಕೊಂಡಿರುವ ಸೆರೆನಾ, ತನ್ನ ಉಬ್ಬುಕೊಂಡಿರುವ ಹೊಟ್ಟೆಯನ್ನ ಎಕ್ಸ್ ಪೋಸ್ ಮಾಡಿದ್ಧಾರೆ. ಫೋಟೋಗ್ರಾಫರ್ ಅನ್ನಿ ಲೀಬೊವಿಟ್ಸ್ ಸೆರೆನಾ ಬೆತ್ತಲೆ ಫೋಟೋವನ್ನ ಎಡಬದಿಯಿಂದ ತನ್ನ ಕ್ಯಾಮೆರಾ ಕಣ್ಣಲ್ಲಿ ಸರೆ ಹಿಡಿದಿದ್ದಾರೆ.
35 ವರ್ಷದ ಸೆರೆನಾ ಆಸ್ಟ್ರೇಲಿಯನ್ ಓಪನಗ್`ಗೆ ತೆರಳುವಾಗ ಗರ್ಭವತಿಯಾಗಿದ್ದರು. ಏಪ್ರಿಲ್`ನಲ್ಲಿ ತನ್ನ ಗರ್ಭಾವಸ್ಥೆ ಬಗ್ಗೆ ಹೇಳಿಕೊಂಡಿದ್ದ ಸೆರೆನಾ ಜನವರಿ ವೇಳೆಗೆ ಆಸ್ಟ್ರೇಲಿಯನ್ ಓಪನ್ ವೇಳೆಗೆ ವಾಪಸ್ ಅಂಗಳಕ್ಕೆ ಇಳಿಯುವುದಾಗಿ ಹೇಳಿದ್ದರು.
ಟ್ವಟ್ಟರ್`ನಲ್ಲಿ ಈ ಬೆತ್ತಲೆ ಫೋಟೋ ಪೋಸ್ಟ್ ಮಾಡಿರುವ ಸೆರೆನಾ ವಿಲಿಯಮ್ಸ್, ವ್ಯಾನಿಟಿ ಫೇರ್`ನಲ್ಲಿ ನನ್ನ ಕವರ್ ಫೋಟೋ ನೋಡಿ. ಹೆಣ್ಣೋ ಅಥವಾ ಗಂಡು ಮಗುವೋ ನಿಮಗೇನನ್ನಿಸುತ್ತದೆ. ಅದನ್ನ ತಿಳಿಯಲು ನಾನು ತುಂಬಾ ಕುತೂಹಲದಲ್ಲಿದ್ದೇನೆ
ನಿಮ್ಮ ಆಲೋಚನೆಗಳನ್ನೂ ಕೇಳುವ ಆಸೆಯಾಗಿದೆ ಎಂದು ಬರೆದುಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ