ಲಿಯೋನಲ್ ಮೆಸ್ಸಿಗೆ ಜೈಲು ಶಿಕ್ಷೆ ಖಾಯಂ

ಬುಧವಾರ, 24 ಮೇ 2017 (20:03 IST)
ಬಾರ್ಸಿಲೋನಾ ಫುಟ್ಬಾಲ್ ದಂತಕಥೆ ಲೀಯೋನಲ್ ಮೆಸ್ಸಿಗೆ ತೆರಿಗೆ ವಂಚನೆ ಪ್ರಕರಣದಲ್ಲಿ ವಿಧಿಸಲಾಗಿದ್ದ 21 ತಿಂಗಳು ಜೈಲು ಮತ್ತು 2.09 ಮಿಲಿಯನ್ ಯೂರೋ ದಂಡದ ಶಿಕ್ಷೆಯನ್ನ ಸ್ಪ್ಯಾನಿಷ್ ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
 

ಮೆಸ್ಸಿ ಮತ್ತವರ ತಂದೆ ಜಾರ್ಜ್ ಹೊರಾಸಿಯೋ ಬೆಲಿಜೆ, ಸ್ವಿಡ್ಜರ್ ಲ್ಯಾಂಡ್, ಬ್ರಿಟನ್, ಉರುಗ್ವೇಗಳಲ್ಲಿ ಕಂಪನಿಗಳನ್ನ ಬಳಸಿಕೊಂಡು 4.16 ಮಿಲಿಯನ್ ಯೂರೋ ತೆರಿಗೆ ವಂಚಿಸಿರುವುದು ಸ್ಥಳೀಯ ಕೋರ್ಟ್ ವಿಚಾರಣೆ ವೇಳೆ ಸಾಬೀತಾಗಿತ್ತು. 2016ರ ಜುಲೈನಲ್ಲಿ ಸ್ಥಳೀಯ ಕೋರ್ಟ್ ಶಿಕ್ಷೆ ಮತ್ತು ದಂಡ ವಿಧಿಸಿ ಆದೇಶಿಸಿತ್ತು.

ಸ್ಥಳೀಯ ಕೋರ್ಟ್ ತೀರ್ಪು ಪ್ರಶ್ನಿ ಮೆಸ್ಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸುಪ್ರೀಂಕೋರ್ಟ್ ಸಹ ಮೆಸ್ಸಿಗೆ ವಿಧಿಸಿದ್ದ ಶಿಕ್ಷೆ ಎತ್ತಿಹಿಡಿದಿದೆ.

ಡ್ಯಾನೋನ್, ಅದಿದಾಸ್, ಪೆಪ್ಸಿ-ಕೋಲಾ, ಕುವೈತ್ ಫುಡ್ ಸೇರಿದಂತೆ ಇತರೆ ಕಂಪನಿಗಳಿಗೆ ಜಾಹೀರಾತು ನೀಡಿದ್ದನ್ನ ಮುಚ್ಚಿಟ್ಟು ತೆರಿಗೆ ವಂಚಿಸಿದ್ದ ಆರೋಪ ಮೆಸ್ಸಿ ಮೇಲಿತ್ತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ