ರೋಜರ್ ಫೆಡರರ್ ವಿರುದ್ಧ ಗೆದ್ದ ವಾರ್ವಿಂಕಾಗೆ ಮಾಂಟೆ ಕಾರ್ಲೋ ಪ್ರಶಸ್ತಿ

ಗುರುವಾರ, 24 ಏಪ್ರಿಲ್ 2014 (17:40 IST)
ಸ್ಟಾನಿಸ್‌ಲಾಸ್ ವಾರ್ವಿಂಕಾ ಸ್ವಿಸ್ ಸಹವರ್ತಿ ಆಟಗಾರ ರೋಜರ್ ಫೆಡರರ್ ಅವರನ್ನು 4-6, 7-6(7/5), 6-2 ಸೆಟ್‌ಗಳಿಂದ ಸೋಲಿಸಿ ಮಾಂಟೋ ಕಾರ್ಲೋ ಮಾಸ್ಟರ್ ಪಂದ್ಯಾವಳಿಯನ್ನು ಗೆದ್ದುಕೊಂಡಿದ್ದಾರೆ.ತಮ್ಮ ಆಪ್ತ ಸ್ನೇಹಿತನ ಜತೆ ಆಡಿದ 15 ಪಂದ್ಯಗಳಲ್ಲಿ ವಾರ್ವಿಂಕಾ ಅವರು ಕೇವಲ ಎರಡು ಪಂದ್ಯಗಳಲ್ಲಿ ಜಯಗಳಿಸಿದ್ದರು.

ಈ ಗೆಲುವಿನ ಫಲವಾಗಿ ವಾರ್ವಿಂಕಾ ವಿಶ್ವ ನಂಬರ್ 3 ರ‌ಾಂಕಿಂಗ್ ಪಡೆದಿದ್ದಾರೆ.ವಾರ್ವಿಂಕಾ ಮುಂಚಿನ ಎರಡು ಮಾಸ್ಟರ್ ಫೈನಲ್ಸ್ ಪಂದ್ಯಗಳನ್ನು ನೋವಾಕ್ ಜೋಕೋವಿಕ್ ಮತ್ತು ರಾಫೆಲ್ ನಡಾಲ್ ಅವರಿಗೆ ಸೋತಿದ್ದರು.

ವೆಬ್ದುನಿಯಾವನ್ನು ಓದಿ