ಕಾಮನ್ ವೆಲ್ತ್ ಗೇಮ್ಸ್: ಇಂದು ಭಾರತದ ಘಟಾನುಘಟಿ ತಾರೆಯರೇ ಕಣಕ್ಕೆ

ಶುಕ್ರವಾರ, 5 ಆಗಸ್ಟ್ 2022 (08:55 IST)
ಬರ್ಮಿಂಗ್ ಹ್ಯಾಮ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿಂದು ಭಾರತಕ್ಕೆ ಮಹತ್ವದ ದಿನ. ಇಂದು ಭಾರತದ ಭರವಸೆಯ ತಾರೆಯರು ಮಹತ್ವದ ಪಂದ್ಯವಾಡಲಿದ್ದಾರೆ.

ವೈಟ್ ಲಿಫ್ಟರ್ ಗಳಂತೆ ಭಾರತಕ್ಕೆ ಪದಕ ಗೆಲ್ಲುವ ಭರವಸೆಯಿರುವ ಕುಸ್ತಿ ವಿಭಾಗದ ಸ್ಪರ್ಧೆಗಳು ಇಂದಿನಿಂದ ಆರಂಭವಾಗುತ್ತಿದೆ. ಭಾರತದ ಖ್ಯಾತ ತಾರೆ ಬಜರಂಗ್ ಪೂನಿಯಾ ಇಂದು ಮೊದಲ ಪಂದ್ಯವಾಡಲಿದ್ದು, ಈ ಪಂದ್ಯ ಅಪರಾಹ್ನ 3.10 ಕ್ಕೆ ಆರಂಭವಾಗಲಿದೆ. ಮಹಿಳಾ ಕುಸ್ತಿ ತಾರೆ ಸಾಕ್ಷಿ ಮಲಿಕ್ 4.50 ಕ್ಕೆ ನಡೆಯಲಿರುವ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಇನ್ನು ಒಲಿಂಪಿಕ್ಸ್ ನಲ್ಲಿ ಭರವಸೆ ಮೂಡಿಸಿದ್ದ ಮಹಿಳೆಯರ ಟೇಬಲ್ ಟೆನಿಸ್ ತಾರೆ ಮಣಿಕ್ ಭಾತ್ರಾ ಇಂದು ಸಿಂಗಲ್ಸ್ ವಿಭಾಗದಲ್ಲಿ ಸೆಣಸಾಡಲಿದ್ದಾರೆ. ಈ ಪಂದ್ಯ 3.15 ಕ್ಕೆ ಆರಂಭವಾಗಲಿದೆ. ಪುರುಷರ ವಿಭಾಗದಲ್ಲಿ ಭಾರತದ ಖ್ಯಾತ ತಾರೆ ಶರತ್ ಕಮಲ್ 5.05 ಕ್ಕೆ ಪಂದ್ಯವಾಅಡಲಿದ್ದಾರೆ. ಭಾರತದ ಪುರುಷರ ರಿಲೇ ತಂಡ ಸ್ಪರ್ಧೆಗಿಳಿಯಲಿದ್ದು, ಈ ಪಂದ್ಯ ಸಂಜೆ 4.19 ಕ್ಕೆ ನಡೆಯಲಿದೆ.

ಬ್ಯಾಡ್ಮಿಂಟನ್ ನಲ್ಲಿ ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ ವಿಭಾಗದ ಪಂದ್ಯಗಳು ಇಂದು ನಡೆಯಲಿದ್ದು, ಭಾರತದ ಪಿ.ವಿ. ಸಿಂಧು, ಕಿಡಂಬಿ ಶ್ರೀಕಾಂತ್ ತಮ್ಮ ಪಂದ್ಯಗಳನ್ನಾಡಲಿದ್ದಾರೆ. ಶ್ರೀಕಾಂತ್ 5.30 ಕ್ಕೆ ಕಣಕ್ಕಿಳಿಯಲಿದ್ದು, ಸಿಂಧು ಆಡಲಿರುವ ಪಂದ್ಯ ಸಂಜೆ 6.10 ಕ್ಕೆ ನಡೆಯಲಿದೆ.

ಸ್ಕ್ವಾಶ್ ನಲ್ಲಿ ಭಾರತದ ಸ್ಟಾರ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್, ಜೋಶ್ನಾ ಚಿನ್ನಪ್ಪ ಜೋಡಿ ಕಣಕ್ಕಿಳಿಯಲಿದ್ದು ಈ ಪಂದ್ಯ ರಾತ್ರಿ 10.30 ಕ್ಕೆ ನಡೆಯಲಿದೆ. ಅಥ್ಲೆಟಿಕ್ಸ್ ನಲ್ಲಿ ಭಾರತದ ಭರವಸೆಯ ತಾರೆ ಹಿಮಾದಾಸ್ 200 ಮೀ. ಸ್ಪರ್ಧೆಯಲ್ಲಿ ಭಾಗಿಯಾಗಲಿದ್ದಾರೆ. ಈ ಸ್ಪರ್ಧೆ ಮಧ‍್ಯರಾತ್ರಿ 12.53 ಕ್ಕೆ ನಡೆಯಲಿದೆ. ಇದಲ್ಲದೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮಹಿಳೆಯರ ಹಾಕಿ ಪಂದ್ಯ ಮಧ್ಯರಾತ್ರಿ 12.45 ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ