ಸುಧಾ ಸಿಂಗ್‌ಗೆ ಹಂದಿ ಜ್ವರ, ಝೀಕಾ ವೈರಸ್ ಸೋಂಕಿಲ್ಲ

ಬುಧವಾರ, 24 ಆಗಸ್ಟ್ 2016 (11:22 IST)
ಝೀಕಾ ವೈರಸ್ ಸೋಂಕಿನ ಶಂಕೆಯ ಮೇಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಿಯೊ ಒಲಿಂಪಿಯನ್ ಮತ್ತು ಭಾರತದ ದೂರದ ಓಟಗಾರ್ತಿ ಸುಧಾ ಸಿಂಗ್ ಅವರಿಗೆ ಹಂದಿ ಜ್ವರಕ್ಕೆ ಪಾಸಿಟಿವ್ ಫಲಿತಾಂಶ ಬಂದಿದ್ದರಿಂದ ಕನಿಷ್ಠ 2 ತಿಂಗಳ ಕಾಲ ಕ್ರೀಡಾ ಚಟುವಟಿಕೆಗಳಿಂದ ಹೊರಗುಳಿಯಲಿದ್ದಾರೆ.
 
 ಸುಧಾ ರಿಯೊ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 3000 ಮೀ ಸ್ಟೀಪಲ್‌ಚೇಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಎಚ್‌1ಎನ್‌1 ಸೋಂಕಿಗೆ ಒಳಗಾಗಿರುವ ಸುಧಾ ಮುಂದಿನ ಎರಡು, ಮೂರು ತಿಂಗಳು ಕ್ರೀಡಾ ಚಟುವಟಿಕೆಯಿಂದ ಹೊರಗುಳಿಯಲಿದ್ದಾರೆ.
 
 ಕಳೆದ ವಾರ ವಿಪರೀತ ಜ್ವರ ಮತ್ತು ಮೈನೋವಿನಿಂದ ರಿಯೊದಿಂದ ಹಿಂತಿರುಗಿದ ಸುಧಾ ಶಂಕಿತ ಝೀಕಾ ವೈರಸ್ ಗುರುತಿಸಲು ಅದೇ ದಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಸುಧಾ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಝೀಕಾ ವೈರಸ್ ಪರೀಕ್ಷೆಗಾಗಿ ಪುಣೆಯ ವೈರಾಲಜಿ ಸಂಸ್ಥೆಗೆ ಕಳಿಸಿದ್ದರು. ಏತನ್ಮಧ್ಯೆ, ಸುಧಾ ಚಿಕಿತ್ಸೆ ವೆಚ್ಚಗಳನ್ನು ರಾಜ್ಯಸರ್ಕಾರವೇ ಭರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ