19 ವರ್ಷದ ಜಿನ್ನಿ ಥ್ರಾಷರ್‌ಗೆ ಶೂಟಿಂಗ್‌ನಲ್ಲಿ ಪ್ರಥಮ ಚಿನ್ನದ ಪದಕ
ಶನಿವಾರ, 6 ಆಗಸ್ಟ್ 2016 (19:43 IST)
ರಿಯೊ ಡಿ ಜನೈರೊ: ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್‌ನಲ್ಲಿ ರಿಯೋ ಒಲಿಂಪಿಕ್ಸ್ ಪ್ರಥಮ ಚಿನ್ನದ ಪದಕವನ್ನು ಅಮೆರಿಕದ ಜಿನ್ನಿ ಥ್ರಾಷರ್ ಮುಡಿಗೇರಿಸಿಕೊಂಡಿದ್ದಾರೆ.
19 ವರ್ಷ ವಯಸ್ಸಿನ ಥ್ರಾಷರ್ ಬೆಳ್ಳಿ ಪದಕ ವಿಜೇತೆ ಡು ಲಿ ಅವರನ್ನು ಅಂತಿಮ ಸುತ್ತಿನಲ್ಲಿ ಸೋಲಿಸಿದರು.ಚೀನಾದ ಯೀ ಸೈಲಿಂಗ್ ಕಂಚಿನ ಪದಕ ಜಯಿಸಿದರು.
ಥ್ರಾಷರ್ ಎನ್‌ಸಿಸಿಎ ಚಾಂಪಿಯನ್ ಆಗಿದ್ದು, ಪ್ರಥಮ ಒಲಿಂಪಿಕ್ಸ್‌ನಲ್ಲೇ ಚಿನ್ನದ ಪದಕ ವಿಜೇತರಾಗಿದ್ದಾರೆ. ಭಾರತದ ಅಪೂರ್ವಿ ಮತ್ತು ಅಯೋನಿಕಾ 10 ಮೀ ಏರ್ ರೈಫಲ್ ಶೂಟಿಂಗ್‌ನಲ್ಲಿ ಫೈನಲ್ ಪ್ರವೇಶಕ್ಕೆ ವಿಫಲರಾಗಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.