ಜೈಕಾ ವೈರಸ್ ಹರಡುವ ಭೀತಿಯಿಂದಾಗಿ ರಿಯೊ ಜಿ ಜನೈರೊನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟವನ್ನು ರದ್ದು ಮಾಡುವುದಿಲ್ಲ ಅಥವಾ ಸ್ಥಳಾಂತರಿಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಪ್ರಸಕ್ತ ಅಂದಾಜಿನ ಆಧಾರದ ಮೇಲೆ 2016ರ ಒಲಿಂಪಿಕ್ಸ್ ಸ್ಥಳ ಬದಲಾವಣೆ ಮಾಡುವುದು ಅಥವಾ ರದ್ದು ಮಾಡುವುದರಿಂದ ಜೈಕಾ ವೈರಸ್ ಅಂತಾರಾಷ್ಟ್ರೀಯ ಹರಡುವಿಕೆಯಲ್ಲಿ ಗಮನಾರ್ಹ ಬದಲಾವಣೆ ಆಗುವುದಿಲ್ಲ ಎಂದು ಹೇಳಿಕೆ ತಿಳಿಸಿದೆ.
500,000 ವಿದೇಶಿ ಪ್ರವಾಸಿಗಳು ಎಲ್ಲಾ ದೇಶಗಳಿಂದ ಕೂಟದಲ್ಲಿ ಭಾಗವಹಿಸಿದಾಗ ಅನಗತ್ಯ ಅಪಾಯ ಎದುರಾಗುತ್ತದೆ. ಸೋಂಕಿಗೆ ಗುರಿಯಾಗಿ ಸ್ವದೇಶಕ್ಕೆ ಹಿಂತಿರುಗಿದಾಗ ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆಯಿರುತ್ತದೆ. ದಕ್ಷಿಣ ಏಷ್ಯಾ, ಆಫ್ರಿಕಾದಂತ ಬಡ ದೇಶಗಳಲ್ಲಿ ಇದರಿಂದ ಸಾವು, ನೋವು ಹೆಚ್ಚಾಗುತ್ತದೆ. ಆದ್ದರಿಂದ ಬರೀ ಕ್ರೀಡಾಕೂಟಕ್ಕಾಗಿ ಅಪಾಯವನ್ನು ಒಡ್ಡಿಕೊಳ್ಳುವುದು ಸರಿಯಲ್ಲ ಎಂದು ಪತ್ರದಲ್ಲಿ ತಿಳಿಸಿದ್ದರು.