ಟೆನಿಸ್ ಲೋಕದ ಕೃಷ್ಣ ಸುಂದರಿಗೆ ಮದ್ವೆಯಂತೆ!

ಶನಿವಾರ, 31 ಡಿಸೆಂಬರ್ 2016 (08:35 IST)
ನ್ಯೂಯಾರ್ಕ್: ಟೆನಿಸ್ ಗೊತ್ತಿಲ್ಲದವರಿಗೂ ಈ ಕೃಷ್ಣ ಸುಂದರಿಯನ್ನು ಗೊತ್ತಿರುತ್ತದೆ. ಅಮೆರಿಕಾದ ಖ್ಯಾತ ಟೆನಿಸ್ ತಾರೆ ಸೆರೆನಾ ವಿಲಿಯಮ್ಸ್ ಎಂದರೆ ಅಷ್ಟು ಫೇಮಸ್ಸು. ಅಂತಿಪ್ಪಾ ಕೃಷ್ಣ ಸುಂದರಿ ಮದುವೆಯಾಗುತ್ತಿದ್ದಾರಂತೆ.

ರೆಡಿಟ್ ಸಹ ಸಂಸ್ಥಾಪಕ ಅಲೆಕ್ಸಿಸ್ ಒಹಾನಿಯನ್ ಜತೆ ಸೆರೆನಾ ವಿವಾಹವಾಗಲಿದ್ದಾರೆ. 33 ವರ್ಷದ ಸೆರೆನಾ ಈ ಬಗ್ಗೆ ತಮ್ಮ ರೆಡಿಟ್ ಪೇಜ್ ನಲ್ಲಿ ಕಾವ್ಯಾತ್ಮಕವಾಗಿ ಪ್ರಕಟಿಸಿದ್ದಾರೆ. ಆದರೆ ವಿವಾಹ ಯಾವಾಗ ನಡೆಯುತ್ತದೆಂದು ಸ್ಪಷ್ಟಪಡಿಸಿಲ್ಲ.

22 ಗ್ರ್ಯಾಂಡ್ ಸ್ಲಾಂ ಟೈಟಲ್ ಗಳನ್ನು ಗೆದ್ದಿರುವ ಸೆರೆನಾಗೆ ಟ್ವಿಟರ್ ನಲ್ಲಿ ಶುಭಾಷಯಗಳ ಮಹಾಪೂರವೇ ಹರಿದು ಬಂದಿದೆ. ಈ ಹಿಂದೆ ಸೆರೆನಾ ಹೆಸರು ಖ್ಯಾತ ಹಾಲಿವುಡ್ ನಿರ್ದೇಶಕರೊಂದಿಗೂ ಕೇಳಿಬಂದಿತ್ತು. ಆದರೆ ಕೊನೆಗೂ ತಮ್ಮ ನಿಜ ಜೀವನದ ಹೀರೋವನ್ನು ಆರಿಸಿಕೊಂಡಿದ್ದಾರೆ ಸೆರೆನಾ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ