ಕ್ರೀಡಾ ಕ್ಷೇತ್ರಕ್ಕೆ ಇದು ಬರೀ ಸೂಪರ್ ಸಂಡೆಯಲ್ಲವೋ.. ಸೀನಿಯರ್ಸ್ ಸಂಡೇ..!

ಕೃಷ್ಣವೇಣಿ ಕೆ

ಸೋಮವಾರ, 30 ಜನವರಿ 2017 (09:59 IST)
ಬೆಂಗಳೂರು: ನಿನ್ನೆ ಕ್ರೀಡಾ ಜಗತ್ತಿಗೆ ವಿಶೇಷ ದಿನ. ಟೆನಿಸ್, ಕ್ರಿಕೆಟ್, ಬ್ಯಾಡ್ಮಿಂಟನ್ ಎಲ್ಲಾ ಕ್ರೀಡಾ ಕ್ಷೇತ್ರಕಕ್ಕೂ ನಿನ್ನೆ ಸ್ಪೆಷಲ್ ಡೇ. ಭಾರತಕ್ಕಂತೂ ಶುಭದಿನವಾಗಿ ಪರಿಣಮಿಸಿತು. ಅದರಲ್ಲೂ ವಿಶೇಷವಾಗಿ ಹಿರಿಯ ಕ್ರೀಡಾಳುಗಳದ್ದೇ ಪಾರಮ್ಯ.

 
ಮೊದಲೆಯದಾಗಿ ನಿನ್ನೆ ಇಡೀ ವಿಶ್ವವೇ ಎದುರು ನೋಡುತ್ತಿದ್ದ ಆಸ್ಟ್ರೇಲಿಯಾ ಓಪನ್ ಟೆನಿಸ್ ಪಂದ್ಯಾವಳಿಯ ಫೈನಲ್ ಪಂದ್ಯ. ರಫೇಲ್ ನಡಾಲ್ ಮತ್ತು ಹಿರಿಯ ಟೆನಿಸಿಗ ಸ್ವಿಜರ್ ಲ್ಯಂಆಡ್ ನ ರೋಜರ್ ಫೆಡರರ್ ನಡುವಿನ ಪಂದ್ಯ. ಇದುವರೆಗೆ ಇವರಿಬ್ಬರ  ನಡುವೆ ಪಂದ್ಯ ನಡೆದಾಗಲೆಲ್ಲಾ ನಡಾಲ್ ಮೇಲುಗೈ ಸಾಧಿಸುತ್ತಿದ್ದರು. ಆದರೆ ನಿನ್ನೆ ಮಾತ್ರ ಹಿರಿಯ, ಟೆನಿಸ್ ನ ಜಂಟಲ್ ಮ್ಯಾನ್ ಫೆಡರರ್ ಚಾಂಪಿಯನ್ ಆದರು. ಮಹಿಳಾ ಸಿಂಗಲ್ಸ್ ನಲ್ಲೂ ಹಿರಿಯ ತಾರೆ ಸೆರೆನಾ ವಿಲಿಯಮ್ಸ್ ಚಾಂಪಿಯನ್!

ಕ್ರಿಕೆಟ್ ನಲ್ಲೂ ಅಷ್ಟೇ. ಆಶಿಷ್ ನೆಹ್ರಾರನ್ನು ಟಿ-ಟ್ವೆಂಟಿ ಪಂದ್ಯಗಳಿಗೆ ಆಯ್ಕೆ ಮಾಡಿದ್ದು ಯಾಕೋ ಎಂದು ಹಲವರು ಟೀಕಿಸಿದ್ದರು. ಆದರೆ ನಿನ್ನೆ ನೆಹ್ರಾ ಇಲ್ಲದಿದ್ದರೆ, ಇಂಗ್ಲೆಂಡ್ ಸರಣಿ ಕೈವಶ ಮಾಡಿಕೊಂಡುಬಿಡುತ್ತಿತ್ತು. ಆರಂಭದಲ್ಲಿ ಎರಡು ವಿಕೆಟ್ ಕಿತ್ತಿದ್ದು ಮಾತ್ರವಲ್ಲ, 16 ನೇ ಓವರ್ ನಲ್ಲಿ ಕಡಿಮೆ ರನ್ ಕೊಟ್ಟು ಒಂದು ವಿಕೆಟ್ ಕಿತ್ತು ಯುವ ಬೌಲರ್ ಜಸ್ಪ್ರೀತ್ ಬುಮ್ರಾಗೆ ಹಾಗೂ ಟೀಂ ಇಂಡಿಯಾ ಗೆಲುವಿಗೆ ವೇದಿಕೆ ಹಾಕಿಕೊಟ್ಟಿದ್ದೇ ನೆಹ್ರಾ.

ಬ್ಯಾಡ್ಮಿಂಟನ್ ನಲ್ಲಿ ಇತ್ತೀಚೆಗಷ್ಟೇ ಹಿರಿಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಮಲೇಷ್ಯಾ ಓಪನ್ ಚಾಂಪಿಯನ್ ಆಗಿದ್ದರು. ನಿನ್ನೆ ನಡೆದ ಸೈಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯ ಫೈನಲ್ ನಲ್ಲಿ ಭಾರತದ ಪಿವಿ ಸಿಂಧು ಮಹಿಳಾ ಸಿಂಗಲ್ಸ್ ವಿಭಾಗದ ಚಾಂಪಿಯನ್ ಆದರು.  ಈಗ ಹೇಳಿ ಈ ವರ್ಷ ಅದರಲ್ಲೂ ನಿನ್ನೆಯ ದಿನ ಹಿರಿಯರ ದಿನವಲ್ಲವೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ