ಟೇಬಲ್ ಟೆನಿಸ್ ನಲ್ಲಿ ಮಣಿಕ್ ಬಾತ್ರಾ, ಬಾಕ್ಸಿಂಗ್ ನಲ್ಲಿ ಮೇರಿ ಕೋಮ್ ಗೆ ಗೆಲುವು

ಭಾನುವಾರ, 25 ಜುಲೈ 2021 (13:45 IST)
ಟೋಕಿಯೋ: ಟೇಬಲ್ ಟೆನಿಸ್ ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಮಣಿಕ್ ಬಾತ್ರಾ ಎರಡನೇ ಸುತ್ತಿನಲ್ಲಿ ಗೆಲುವು ಸಾಧಿಸಿ ಮೂರನೇ ಹೊತ್ತಿಗೆ ಪ್ರವೇಶ ಪಡೆದಿದ್ದಾರೆ.

 
ಇದೀಗ ಮುಕ್ತಾಯಗೊಂಡ ಪಂದ್ಯದಲ್ಲಿ ಮಣಿಕ್ ಬಾತ್ರಾ ಉಕ್ರೇನ್ ನ ಪೆಸೋಸ್ಕಾ ವಿರುದ್ಧ 4-3 ಅಂತರದಿಂದ ಗೆಲುವು ಸಾಧಿಸಿದ್ದಾರೆ. ಎರಡೂ ಆಟಗಾರರು ಜಿದ್ದಾಜಿದ್ದಿನ ಹೋರಾಟ ನಡೆಸಿದ್ದು, ಅಂತಿಮ ಸೆಟ್ ನಲ್ಲಿ ಉತ್ತಮ ನಿರ್ವಹಣೆ ತೋರಿದ ಮಣಿಕ್ ಗೆಲುವು ತಮ್ಮದಾಗಿಸಿಕೊಂಡರು.

ಬಾಕ್ಸಿಂಗ್: ಇನ್ನು, ಮಹಿಳೆಯರ ಬಾಕ್ಸಿಂಗ್ ನಲ್ಲಿ ಭಾರತದ ಭರವಸೆಯ ಆಟಗಾರ್ತಿ ಮೇರಿ ಕೋಮ್ 4-1 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಡೊಮಿನಿಕ್ ರಿಪಬ್ಲಿಕ್ ನ ಹರ್ನಾಂಡಿಸ್ ವಿರುದ್ಧ ಮೇರಿ ಗೆಲುವಿನ ಶುಭಾರಂಭ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ