‘ಬೆಳ್ಳಿ’ ಹುಡುಗಿ ಮೀರಾ ಬಾಯಿಗೆ ಜೀವನಪೂರ್ತಿ ಫ್ರೀ ಪಿಜ್ಜಾ ಗಿಫ್ಟ್!

ಭಾನುವಾರ, 25 ಜುಲೈ 2021 (10:20 IST)
ಮುಂಬೈ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದ ಭಾರತದ ವೈಟ್ ಲಿಫ್ಟರ್ ಮೀರಾ ಬಾಯಿ ಚಾನುಗೆ ಡೊಮಿನೊಸ್ ಕಂಪನಿ ಜೀವನಪೂರ್ತಿ ಉಚಿತವಾಗಿ ಪಿಜ್ಜಾ ನೀಡಲಿದೆ!


ಬೆಳ್ಳಿ ಗೆದ್ದ ಬಳಿಕ ಸಂದರ್ಶನದಲ್ಲಿ ಮೀರಾ, ಇಷ್ಟು ದಿನ ಕಟ್ಟುನಿಟ್ಟಿನ ಡಯಟ್ ನಲ್ಲಿದ್ದೆ. ಇನ್ನೀಗ, ಪಿಜ್ಜಾ ತಿನ್ನಬೇಕೆನಿಸುತ್ತದೆ ಎಂದಿದ್ದರು. ಮೀರಾ ಹೀಗೊಂದು ಮಾತು ಹೇಳಿದ್ದೇ ತಡ, ಡೊಮಿನೊಸ್ ಬೆಳ್ಳಿ ಹುಡುಗಿಗೆ ಭರ್ಜರಿ ಆಫರ್ ನ್ನೇ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಸ್ಥೆ ‘ಆಕೆ ಹೇಳಿದ್ದನ್ನು ನಾವು ಕೇಳಿಸಿಕೊಂಡೆವು. ಇನ್ನು ಮುಂದೆ ಮೀರಾಬಾಯಿ ಪಿಜ್ಜಾ ತಿನ್ನಲು ಕಾಯುವುದು ಬೇಕಾಗಿಲ್ಲ. ಆಕೆಗೆ ಜೀವನಪೂರ್ತಿ ಉಚಿತ ಪಿಜ್ಜಾ ಗಿಫ್ಟ್ ಆಗಿ ನೀಡುತ್ತೇವೆ’ ಎಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ