ಪೋರ್ಚುಗಲ್ ತಂಡವನ್ನು ಸೋಲಿನಿಂದ ಪಾರು ಮಾಡಿದ ರೊನಾಲ್ಡೊ

ಗುರುವಾರ, 23 ಜೂನ್ 2016 (17:00 IST)
ಕ್ರಿಸ್ಟಿಯಾನೊ ರೊನಾಲ್ಡೊ ಹಂಗರಿ ವಿರುದ್ಧ ಐರೋಪ್ಯ ಚಾಂಪಿಯನ್‌ಷಿಪ್‌ನಲ್ಲಿ ಎರಡು ಗೋಲುಗಳನ್ನು ಗಳಿಸುವ ಮೂಲಕ ದಾಖಲೆ ನಿರ್ಮಿಸಿದರು ಮತ್ತು ಪೋರ್ಚು‌ಗಲ್ ಕೊನೆಯ 16ರ ಸ್ಥಾನವನ್ನು ಪ್ರವೇಶಿಸಿದೆ.
 
ಐರಿಷ್, ಬೆಲ್ಜಿಯನ್ಸ್, ಐಸ್‌ಲೆಂಡ್, ಪೋರ್ಚು‌ಗಲ್, ಫ್ರಾನ್ಸ್, ವೇಲ್ಸ್, ಜರ್ಮನಿ, ಕ್ರೊಯೇಷಿಯಾ, ಇಟಲಿ, ಸ್ವಿಜರ್‌ಲೆಂಡ್, ಇಂಗ್ಲೆಂಡ್, ಪೋಲೆಂಡ್, ಸ್ಪೇನ್, ಸ್ಲೋವಾಕಿಯಾ, ಉತ್ತರ ಐರ್ಲೆಂಡ್ ಮತ್ತು ಹಂಗರಿ ಕೊನೆಯ 16ರ ಸಾಲಿನಲ್ಲಿ ಸೇರಿದೆ.
ಐಸ್‌ಲೆಂಡ್ ಮತ್ತು ಆಸ್ಟ್ರಿಯಾ ವಿರುದ್ಧ ನಿರಾಶೆಯ ಪ್ರದರ್ಶನದ ಬಳಿಕ ರೊನಾಲ್ಡೊ ಸಕಾಲದಲ್ಲಿ ಉತ್ತಮ ಆಟವಾಡಿ ಪೋರ್ಚು‌ಗಲ್ ತಂಡವನ್ನು ಸೋಲಿನಿಂದ ಬಚಾವ್ ಮಾಡಿದರು. 
 
ಹಂಗರಿಯ ಜೋಲ್ಟಾನ್ ಜೆರಾ ಆರಂಭದಲ್ಲೇ ಗೋಲು ಹೊಡೆದು ಮುನ್ನಡೆ ಸಾಧಿಸಿತು. ಹಾಫ್ ಟೈಮ್‌ಗೆ ಮುಂಚಿತವಾಗಿ ರೊನಾಲ್ಡೊ ನಾನಿಗೆ ಪಾಸ್ ನೀಡಿ ನಾನಿ ಗೋಲಾಗಿಸಿ ಸ್ಕೋರನ್ನು ಸಮಗೊಳಿಸಿದರು. 
 
ಜುಡ್‌ಸ್ಯಾಕ್ ಅವರ ಫ್ರೀ ಕಿಕ್ ಗೋಲಾಗಿ ಹಂಗರಿ 2-1ರಿಂದ ಮುನ್ನಡೆ ಸಾಧಿಸಿತು. ಆದರೆ ರೊನಾಲ್ಡೊ ಹಿಂಗಾಲಿನಿಂದ ಐತಿಹಾಸಿಕ ಗೋಲನ್ನು ಹೊಡೆದು ಸಮಗೊಳಿಸಿದರು. 5 ನಿಮಿಷಗಳ ನಂತರ ಜುಡ್‌ಸಾಕ್ ಇನ್ನೊಂದು ಗೋಲು ಹಂಗರಿಗೆ ಮುನ್ನಡೆ ಒದಗಿಸಿತು. ಬಳಿಕ ರೊನಾಲ್ಡೊ ಅವರ ಹೆಡರ್‌ನಿಂದ ಇನ್ನೊಂದು ಗೋಲು ಗಳಿಸಿ ಸ್ಕೋರನ್ನು 3-3 ಸಮಗೊಳಿಸಿದರು

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ