ಯುಎಸ್ ಓಪನ್: ಮಹಿಳಾ ಡಬಲ್ಸ್‌ನಲ್ಲಿ ಸಾನಿಯಾ ಜೋಡಿಗೆ ಸೋಲು
ಗುರುವಾರ, 8 ಸೆಪ್ಟಂಬರ್ 2016 (09:07 IST)
ಭಾರತದ ಸಾನಿಯಾ ಮಿರ್ಜಾ ಮತ್ತು ಜೆಕ್ ಗಣರಾಜ್ಯದ ಬಾರ್ಬೋರ್ ಸ್ಟ್ರೈಕೋವಾ ಜೋಡಿ ಮಹಿಳಾ ವಿಭಾಗದ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೋತು ಟೂರ್ನಿಯಿಂದ ಹೊರ ಬಿದ್ದಿದೆ.
ಮೊದಲ ಶ್ರೇಯಾಂಕಿತ ಜೋಡಿ ಕಾರ್ಲೋನೆ ಗಾರ್ಸಿಯಾ - ಕ್ರಿಸ್ಟೀನಾ ಜೋಡಿ ವಿರುದ್ಧ ಕಣಕ್ಕಿಳಿದಿದ್ದ ಸಾನಿಯಾ ಜೋಡಿ ಮೊದಲ ಸೆಟ್‌ನಲ್ಲಿ ಪ್ರಬಲ ಪೈಪೋಟಿಯನ್ನು ನೀಡಿತು. ಆದರೆ ಟ್ರೈಬ್ರೆಕರ್‌ವರೆಗೂ ಹೋದ ಸೆಟ್‌ನ್ನು ಗಾರ್ಸಿಯಾ ಜೋಡಿ ತಮ್ಮದಾಗಿಸಿಕೊಂಡಿತು.
ಆದರೆ ಎರಡನೇ ಸೆಟ್‌ನಲ್ಲಿ ಎದುರಾಳಿ ಹೊಡೆತಕ್ಕೆ ತತ್ತರಿಸಿದ ಸಾನಿಯಾ ಜೋಡಿ 6-1ರ ಸೆಟ್‌ನಲ್ಲಿ ಸೋತು ಸೆಮಿಫೈನಲ್ ಕನಸನ್ನು ಭಗ್ನ ಮಾಡಿಕೊಂಡಿತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ