ಯುಎಸ್ ಓಪನ್: ಸಾನಿಯಾಗೆ ಮುನ್ನಡೆ, ಮಿಶ್ರ ಡಬಲ್ಸ್‌ನಿಂದ ಬೋಪಣ್ಣ ನಿರ್ಗಮನ

ಮಂಗಳವಾರ, 6 ಸೆಪ್ಟಂಬರ್ 2016 (17:45 IST)
ಯುಎಸ್ ಓಪನ್‌ನ ಮಹಿಳಾ ಡಬಲ್ಸ್‌ನಲ್ಲಿ ಭಾರತದ ಭರವಸೆಯ ತಾರೆ ಸಾನಿಯಾ ಮಿರ್ಜಾ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ. ಆದರೆ ಕೆನಡಾದ ಗ್ಯಾಬ್ರಿಯೇಲಾ ಡಾಬ್ರೋವಸ್ಕಿ ಜತೆ ಮಿಸ್ರ ಡಬಲ್ಸ್ ಕಣಕ್ಕಿಳಿದಿದ್ದ ರೋಹನ್ ಬೋಪಣ್ಣ ಸೋತು ನಿರ್ಗಮಿಸಿದ್ದಾರೆ.

ಸೋಮವಾರ ರಾತ್ರಿ ನಡೆದ ಕ್ಯಾರ್ಟರ್ ಫೈನಲ್ ಪಂದ್ಯದಲ್ಲಿ ಗ್ಯಾಬ್ರಿಯೇಲಾ ಮತ್ತು ಬೋಪಣ್ಣ ಶ್ರೇಯಾಂಕ ರಹಿತ ಕೊಲಂಬಿಯಾದ ರಾಬರ್ಟ್ ಫರಾಹ್ ಮತ್ತು ಜರ್ಮನಿಯ ಅನ್ನಾಲೇನಾ ವಿರುದ್ಧ ಸಂಘರ್ಷ ನಡೆಸಿದರು. ಬೋಪಣ್ಣ ಮತ್ತು ಗ್ಯಾಬ್ರಿಯೇಲಾ  ಆರಂಭ ಭರ್ಜರಿ ಆಗಿತ್ತಾದರೂ (6-1, 2-6, 8-10) ಬಳಿಕ ಕುಸಿಯುತ್ತಾ ಸಾಗಿ ಸೋಲನ್ನು ಕಂಡರು. 58 ನಿಮಿಷಕ್ಕೆ ಪಂದ್ಯ ಕೊನೆಗೊಂಡಿತು. 
 
ಏಳನೇ ಶ್ರೇಯಾಂಕಿತ ಅಮೆರಿಕನ್ ಜೋಡಿ ಕೊಕೊ ವಂದೆವೇಘೆ - ರಾಜೀವ್ ರಾಮ್ ಮತ್ತು ಜೆಕ್ -ಕ್ರೋಟಿಯನ್ ಜೋಡಿ ಬಾರ್ಬರಾ ಕ್ರೆಜ್ಸಿಕೋವಾ ಮತ್ತು ಮೆರಿನ್ ಡ್ರಾಗಂಜಾ ನಡುವಿನ ಹಣಾಹಣಿಯಲ್ಲಿ ಗೆದ್ದವರ ಜತೆಯಲ್ಲಿ ರಾಬರ್ಟ್ ಫರಾಹ್- ಅನ್ನಾಲೇನಾ ಮುಂದಿನ ಹಂತದಲ್ಲಿ ಸೆಣಸಾಡಲಿದ್ದಾರೆ.
 
ಏಳನೇ ಶ್ರೇಯಾಂಕಿತ ಸಾನಿಯಾ ಮತ್ತು ಜೆಕ್ ಗಣರಾಜ್ಯದ ಬಾರ್ಬರಾ ಕ್ರೆಜಿಕೋವಾ ಜೋಡಿ ಶ್ರೇಯಾಂಕ ರಹಿತ ಅಮೇರಿಕನ್-ಜಪಾನೀಸ್ ಜೋಡಿ ನಿಕೊಲ್ ಗಿಬ್ಸ್ ಮತ್ತು ನಾವೊ ಹಿಬಿನೊ ಅವರನ್ನು 6-4,7-5 ರಿಂದ ಸೋಲಿಸಿದ್ದಾರೆ. 
 
ಒಂದು ಗಂಟೆ 17 ನಿಮಿಷದಲ್ಲಿ ಅವರಿಬ್ಬರು ಗೆಲುವನ್ನು ತಮ್ಮದಾಗಿಸಿಕೊಂಡರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ