ಬಿಳಿ ಯುವತಿಯ ಜತೆ ಉಸೇನ್ ಬೋಲ್ಟ್ ಸಂಬಂಧಕ್ಕೆ ಟೀಕೆ

ಶನಿವಾರ, 22 ಆಗಸ್ಟ್ 2015 (20:11 IST)
ಜಮೈಕಾದ 6 ಅಡಿ 6 ಇಂಚು ಎತ್ತರದ ಉಸೈನ್ ಬೋಲ್ಡ್ ಶನಿವಾರ ಬೀಜಿಂಗ್‌ನಲ್ಲಿ  ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದಾರೆ. 2012ರಲ್ಲಿ ಲಂಡನ್ ಒಲಿಂಪಿಕ್ಸ್  ಓಟವೊಂದರಲ್ಲಿ ಗೆದ್ದ ಕೂಡಲೇ ತನ್ನ ಶ್ವೇತ ವರ್ಣದ ಗೆಳತಿಯನ್ನು ತಬ್ಬಿಕೊಂಡು  ಚುಂಬಿಸಿದಾಗ ಅವರು ವಿವಾದಕ್ಕೆ ಗುರಿಯಾಗಿದ್ದರು.

ಉಸೇನ್ ಬೋಲ್ಟ್  2012ರ ಲಂಡನ್ ಒಲಿಂಪಿಕ್ಸ್ ಸಂದರ್ಭದಲ್ಲಿ  ತಮ್ಮ ಗೆಳತಿ ಸ್ಲೋವಾಕಿಯಾದ ಫ್ಯಾಷನ್ ವಿನ್ಯಾಸಕಿ ಲುಬಿಕಾ ಸ್ಲೋವಾಕ್‌ಳನ್ನು ಚುಂಬಿಸಿದಾಗ ಇಡೀ ಜಮೈಕಾದಲ್ಲಿ ಅವರು ಚರ್ಚಾಸ್ಪದ ವಸ್ತುವಾದರು.  ವಿದೇಶಿ ಬಿಳಿಯ ಮಹಿಳೆ ಜತೆ ಸಂಬಂಧ ಇಟ್ಟುಕೊಂಡಿದ್ದಕ್ಕಾಗಿ ರಾಷ್ಟ್ರದ ಜನರು ಅವರನ್ನು ಟೀಕಿಸಿದರು. 
 
 ಉಸೇನ್ ಬೋಲ್ಟ್ ಒಟ್ಟು ಏಳು ಯುವತಿಯರ ಜತೆ ಸಂಬಂಧ ಹೊಂದಿದ್ದಾರೆಂದು ವರದಿಯೊಂದು ಹೇಳಿದೆ. ಲುಬಿಕಾ ಸ್ಲೋವಾಕ್ ಅಲ್ಲದೇ ಮೆಲಿಸಾ ಇವಾನ್ಸ್, ತಾಮ್ಸಿನ್ ಎಗರ್‌ಟನ್, ಡಿ ಎಂಜಲ್, ತನೈಷ್ ಸಿಮ್ಸನ್, ರೆಬೆಕಾ ಪೈಸ್ಲೆ ಮತ್ತಿತರ ಯುವತಿಯರ ಜತೆ ಅವರ  ಹೆಸರು ಹರಿದಾಡುತ್ತಿದೆ. 
 
 2008ರಲ್ಲಿ ಬೀಜಿಂಗ್ ಒಪಿಂಪಿಕ್ಸ್‌ನಲ್ಲಿ 100 ಮತ್ತು 200 ಮೀಟರ್ ಓಟಗಳನ್ನು ಗೆಲ್ಲುವ ಮೂಲಕ ಉಸೇನ್ ಬೋಲ್ಡ್ ಇತಿಹಾಸ ನಿರ್ಮಿಸಿದ್ದರು. ಲಂಡನ್ ಒಲಿಂಪಿಕ್ಸ್‌ನಲ್ಲಿ 100 ಮತ್ತು 200 ಮೀಟರ್ ಎರಡೂ ಓಟಗಳಲ್ಲಿ ಗೆಲ್ಲುವ ಮೂಲಕ  ಒಲಿಂಪಿಕ್ ಪ್ರಶಸ್ತಿಗಳನ್ನು ಸತತವಾಗಿ ಗೆದ್ದ ಮೊದಲ ಕ್ರೀಡಾಪಟು ಎಂಬ ಹೆಸರು ಪಡೆದಿದ್ದರು. 

ವೆಬ್ದುನಿಯಾವನ್ನು ಓದಿ