ಟೆನ್ನಿಸ್ ತಾರೆ ಕಾರಿಗೆ 79 ವರ್ಷದ ವೃದ್ಧ ಬಲಿ..!

ಶುಕ್ರವಾರ, 30 ಜೂನ್ 2017 (11:00 IST)
ಅಮೆರಿಕ ಟಿನ್ನಿಸ್`ನ ನಂಬರ್ 1ಆಟಗಾರ್ತಿ ವೀನಸ್ ವಿಲಿಯಮ್ಸ್ ಸಂಕಷ್ಟಕ್ಕೆ ಸಿಲುಕಿದ್ಧಾರೆ. ಜೂನ್ 9ರಂದು ಫ್ಲಾರಿಡಾದಲ್ಲಿ ವೀನಸ್ ಕಾರು 79 ವರ್ಷದ ವೃದ್ಧನೊಬ್ಬನಿಗೆ ಗುದ್ದಿ, ಆತ ಮೃತಪಟ್ಟಿದ್ಧಾನೆ.
 

ವಿಲಿಯಮ್ಸ್ ಪರ ಅಟಾರ್ನಿ ಮಾಲ್ಕಮ್ ಕನ್ನಿಂಗ್ ಹ್ಯಾಮ್, ಈ ಅಪಘಾತದಲ್ಲಿ ವೀನಸ್ ತಪ್ಪೇನೂ ಇಲ್ಲ ವಾದಿಸಿದ್ದಾರೆ. ವೀನಸ್ ರೆಡ್ ಲೈಟ್ ಇದ್ದರೂ ಕಾರು ಚಲಾಯಿಸಿದ್ದಾರೆ ಎಂದು ಪೊಲೀಸರು ವಾದಿಸಿದ್ದಾರೆ. ಆದರೆ, ವೀನಸ್ ಗ್ರೀನ್ ಲೈಟ್ ಬಂದ ಬಳಿಕವೇ ತೆರಳಿದ್ದಾರೆ. ಆ ವ್ಯಕ್ತಿಯೇ ವೀನಸ್ ವಿಲಿಯಮ್ಸ್ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ವಾದಿಸಿದ್ದಾರೆ.

ವೀನಸ್ ವಿಲಿಯಮ್ಸ್ ನಿವಾಸ ಪಾಮ್ ಬೀಚ್ ಗಾರ್ಡನ್ ಬಳಿಯೇ ಈ ಅಪಘಾತ ಸಂಭವಿಸಿದೆ. ಟ್ರಾಫಿಕ್ ನಿಯಮ ಮೀರಿದ್ದರ ಬಗ್ಗೆ ಪೊಲೀಸರು ವೀನಸ್`ಗೆ ಯಾವುದೇ ನೋಟಿಸ್ ನೀಡಿಲ್ಲವೆಂದು ಅಟಾರ್ನಿ ಹೇಳಿದ್ದಾರೆ.

ಇದನ್ನೂ ಓದಿ.. ಬೆತ್ತಲಾದ ಟೆನ್ನಿಸ್ ತಾರೆ

 

ವೆಬ್ದುನಿಯಾವನ್ನು ಓದಿ