ಬಾಕ್ಸಿಂಗ್ ಒಕ್ಕೂಟ ರಚನೆಗೆ ವಿಜೇಂದರ್ ಸಿಂಗ್ ಒತ್ತಾಯ

ಶನಿವಾರ, 23 ಜುಲೈ 2016 (19:19 IST)
ಭಾರತದ ಬಾಕ್ಸಿಂಗ್‌ನಲ್ಲಿ ಆಡಳಿತಾತ್ಮಕ ಬಿಕ್ಕಟ್ಟಿನಿಂದ ಕಳವಳಕ್ಕೀಡಾಗಿರುವ ವೃತ್ತಿಪರ ಬಾಕ್ಸರ್ ವಿಜೇಂದರ್ ಸಿಂಗ್, ದೇಶದ ಬಾಕ್ಸಿಂಗ್ ಕ್ರೀಡಾಪಟುಗಳ ಹಿತಾಸಕ್ತಿ ರಕ್ಷಣೆಗಾಗಿ ಹೊಸ ಒಕ್ಕೂಟವನ್ನು ಆದಷ್ಟು ಬೇಗ ಸ್ಥಾಪಿಸುವಂತೆ ಕೋರಿದ್ದಾರೆ.
 
ಕ್ರೀಡಾ ಸಚಿವ ವಿಜಯ್ ಗೋಯಲ್ ಉಪಸ್ಥಿತಿಯಲ್ಲಿ ನಡೆದ ಅಸೋಚಾಮ್ ಸಮಾವೇಶದಲ್ಲಿ ಮಾತನಾಡಿದ ವಿಜೇಂದರ್, ಪ್ರಸಕ್ತ ಪರಿಸ್ಥಿತಿಯಿಂದ ದೇಶದ ಬಾಕ್ಸರ್‌ಗಳಿಗೆ ಅಂತಾರಾಷ್ಟ್ರೀಯ ಈವೆಂಟ್‌ಗಳಲ್ಲಿ ಧ್ವನಿಎತ್ತಲು ಸಾಧ್ಯವಾಗುತ್ತಿಲ್ಲ ಎಂದರು.
 
ಕಳೆದ ಮೂರು ನಾಲ್ಕು ವರ್ಷಗಳಿಂದ ನಮ್ಮ ದೇಶದಲ್ಲಿ ಬಾಕ್ಸಿಂಗ್ ಒಕ್ಕೂಟವಿಲ್ಲ. ತಾತ್ಕಾಲಿಕ ಸಮಿತಿಯು ಪ್ರಸಕ್ತ ಬಾಕ್ಸಿಂಗ್ ನಿರ್ವಹಿಸುತ್ತಿದೆ. ಇದಕ್ಕೆ ಮುಂಚೆ 10ರಿಂದ 12 ವರ್ಷಗಳ ಕಾಲ(2012ರವರೆಗೆ( ಅಭಯ್ ಸಿಂಗ್ ಚೌಟಾಲಾ ಬಾಕ್ಸಿಂಗ್ ಒಕ್ಕೂಟದ ಅಧ್ಯಕ್ಷರಾಗಿದ್ದರು. ಆದರೆ ಕೋರ್ಟ್ ಕೇಸ್ ಆರಂಭವಾದ ಮೇಲೆ ನಮಗೆ ಒಕ್ಕೂಟವೇ ಇಲ್ಲ ಎಂದು ಒಲಿಂಪಿಕ್ ಕಂಚಿನ ಪದಕ ವಿಜೇತ ವಿಜೇಂದರ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ