ವೃತ್ತಿಪರ ಬಾಕ್ಸರ್‌ಗೆ ಪರಿವರ್ತನೆಯಾದ ವಿಜೇಂದರ್ ಸಿಂಗ್

ಸೋಮವಾರ, 29 ಜೂನ್ 2015 (18:31 IST)
ಎಲ್ಲಾ ಊಹಾಪೋಹಗಳಿಗೆ ತೆರೆಎಳೆದ ಒಲಿಂಪಿಕ್ ಕಂಚಿನ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ವೃತ್ತಿಪರ ಬಾಕ್ಸರ್‌ಗೆ ಬದಲಾಗುವ ಮೂಲಕ ದೊಡ್ಡ ಹೆಜ್ಜೆಯನ್ನು ಮುಂದಿರಿಸಿದ್ದಾರೆ. ವಿಜೇಂದ ಬ್ರಿಟಿಷ್ ಪ್ರೊಮೋಟರ್ ಫ್ರಾನ್ಸಿಸ್ ವಾರೆನ್ ಜೊತೆಗೂಡಲಿದ್ದು, ಈಗಾಗಲೇ 6 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. 
 
ವಿಜೇಂದರ್ ಕ್ವೀನ್ಸ್ ಬೆರಿ ಪ್ರೊಮೋಷನ್ಸ್ ಜೊತೆ ಬಹು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದು, ಮಿಡಲ್ ವೈಟ್ ವಿಭಾಗದಲ್ಲಿ ಪ್ರಥಮ ವರ್ಷ ಕನಿಷ್ಠ 6 ಬಾರಿ ಹೋರಾಟ ಮಾಡಲಿದ್ದಾರೆ. 
 
ವೃತ್ತಿಪರ ಬಾಕ್ಸರ್‌ಗೆ ಪರಿವರ್ತನೆಯಾಗುವ ವಿಜೇಂದರ್ ನಿರ್ಧಾರದಿಂದ, ರಿಯೋ ಒಲಿಂಪಿಕ್ಸ್‌ನಲ್ಲಿ ಮುಂದಿನ ವರ್ಷ ಭಾರತವನ್ನು ಪ್ರತಿನಿಧಿಸುವುದಿಲ್ಲ. ವಿಕಾಸ್ ಕೃಷ್ಣನ್ ಅವರು ಮಿಡಲ್‌ವೇಟ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.  ನಿಯಮಗಳ ಪ್ರಕಾರ, ಬಾಕ್ಸರ್ ವೃತ್ತಿಪರರಾಗಿ ಪರಿವರ್ತನೆಯಾದ ಬಳಿಕ ಹವ್ಯಾಸಿ ಮಟ್ಟದಲ್ಲಿ ಅವರು ಸ್ಪರ್ಧಿಸುವಂತಿಲ್ಲ. 

ವೆಬ್ದುನಿಯಾವನ್ನು ಓದಿ