ವಿಜೇಂದರ್ ಸಿಂಗ್ ಸೋಲಿಸಲು ಹಾವಿನ ರಕ್ತ ಕುಡಿಯುತ್ತಿರುವ ಅಲೆಕ್ಸಾಂಡರ್ ಹೋವರ್ತ್

ಬುಧವಾರ, 9 ಮಾರ್ಚ್ 2016 (19:25 IST)
ಭಾರತದ ಖ್ಯಾತ ಬಾಕ್ಸಿಂಗ್ ಆಟಗಾರ ವಿಜೇಂದರ್ ಸಿಂಗ್ ಅವರನ್ನು ಸೋಲಿಸಲು ಅವರ ಪ್ರತಿಸ್ಪರ್ಧಿಯೊಬ್ಬರು ಹಾವಿನ ರಕ್ತವನ್ನು ಕುಡಿಯುತ್ತಿದ್ದಾರೆಂದರೆ ನೀವು ನಂಬುತ್ತೀರಾ? ಹೌದು  ಮಾರ್ಚ್ 12 ರಂದು ಲಿವರ್  ಪೂಲ್‌ನಲ್ಲಿ ಸಿಂಗ್ ಅವರನ್ನು ಎದುರಿಸಲಿರುವ ಅಲೆಕ್ಸಾಂಡರ್ ಹೋವರ್ತ್‌ಗೆ ಭಾರತೀಯ ಸ್ಟಾರ್ ಆಟಗಾರನನ್ನು ಸೋಲಿಸಲು ಸತತ ತಾಲೀಮು ಮತ್ತು ವರಸೆ ಸಾಕೆನ್ನುಸುತ್ತಿಲ್ಲವೆನಿಸಿರಬೇಕು. ಜಯಕ್ಕಾಗಿ ಅತಿಮಾನುಷ ಶಕ್ತಿಹೊಂದಲು ಅವರು ಹಾವಿನ ರಕ್ತ ಸೇವಿಸುತ್ತಿದ್ದಾರಂತೆ. 
ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಜೇಯರಾಗುತ್ತ ಮುನ್ನಡೆದಿರುವ ಸಿಂಗ್ ಅವರನ್ನು  ಶತಾಯಗತಾಯ ಸೋಲಿಸುವುದಾಗಿ ಹಂಗೇರಿ ಮೂಲದ 20 ವರ್ಷದ ಅಲೆಕ್ಸಾಂಡರ್ ಹೋವರ್ತ್ ಹೇಳಿಕೊಂಡಿದ್ದಾರೆ. 
 
ಅನೇಕ ಶತಮಾನಗಳಿಂದಲೂ ನನ್ನ ಕುಟುಂಬದಲ್ಲಿ ಹಾವಿನ ಹಸಿ ರಕ್ತ ಕುಡಿಯುವ ಪುರಾತನ ಮತ್ತು ಹೆಮ್ಮೆಯ ಸಂಪ್ರದಾಯವಿದೆ. 
 
ನನ್ನ ಪೂರ್ವಜರ ತರಹ ನಾನು ಸಹ ಹುಟ್ಟಾ ಹೋರಾಟಗಾರನಾಗಿದ್ದು, ಗೆಲುವಿಗಾಗಿ ಏನನ್ನು ಬೇಕಾದರೂ ಮಾಡಲು ಸಿದ್ದನಿದ್ದೇನೆ ಎಂದು ಅಲೆಕ್ಸಾಂಡರ್  ಹೊರ್ವಾತ್ ವಿವರಿಸಿದ್ದಾನೆ.
 
ಹಲವು ವರ್ಷಗಳ ಹಿಂದೆ ಟರ್ಕಿಯರನ್ನು ಸೋಲಿಸಲು ಹಂಗೇರಿಯನ್ ಸೈನಿಕರು ಹಾವಿನ ರಕ್ತ ಸೇವಿಸುತ್ತಿದ್ದರು, ಈಗ ನಾನು ಸಿಂಗ್‌ರನ್ನು 
 
ಸೋಲಿಸಲು ಹಾವಿನ ರಕ್ತ ಸೇವಿಸುತ್ತಿದ್ದೇನೆ ಎಂದು ಹೊರ್ವಾತ್ ತಿಳಿಸಿದ್ದಾನೆ.
 
ಪವಿತ್ರ ಪ್ರಾಣಿಗಳ ರಕ್ತ ನನ್ನನ್ನು ಅತ್ಯಂತ ಶಕ್ತಿಶಾಲಿಯನ್ನಾಗಿ ಮಾಡುತ್ತವೆ. ನನ್ನ ನರನಾಡಿಗಳಲ್ಲಿ ಹಾವಿನ ರಕ್ತ ಹರಿಯುತ್ತಿರುವುದರಿಂದ ಸಿಂಗ್ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಹಾವಿನ ರಕ್ತ ನನ್ನ ಪ್ರತಿದಿನದ ಆಹಾರದ ಒಂದು ಭಾಗವಾಗಿರುವುದು ಕಠಿಣ ತಾಲೀಮಿಗೆ ನನ್ನನ್ನು ಶಕ್ತನಾಗಿಸಿದೆ. ಆಯಾಸಗೊಳ್ಳದೆ, ಈ ಮೊದಲಿಗಿಂತ ಹೆಚ್ಚಿನ ಶಕ್ತಿಯಿಂದ ಪಂಚ್ ಮಾಡಲು ಇದು ಸಹಕಾರಿಯಾಗುತ್ತದೆ ಎಂದು  ಹೊರ್ವಾತ್ ಹೇಳುತ್ತಾನೆ.
 
ಈ ರೀತಿಯ ಅಸಾಮಾನ್ಯ ಆಹಾರ ಪದ್ದತಿ ರೂಡಿಸಿಕೊಂಡವರ ಸಾಲಿನಲ್ಲಿ ಕೇವಲ ಕೇವಲ ಹಂಗೇರಿಯನ್‌ರು ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಜಗತ್ತಿನ ಬಲಿಷ್ಠ ಸೈನಿಕರು ಎಂದು ಕರೆಸಿಕೊಳ್ಳುವ ಅಮೆರಿಕದ ನೌಕಾದಳದವರು ನಾಗರಹಾವಿನ ರಕ್ತ ಕುಡಿಯುತ್ತಾರೆಂದು ಎಂದು ಹೇಳಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ