ವಿರಾಟ್ ಕೊಹ್ಲಿ, ಸಾಕ್ಷಿ ಮಲಿಕ್ ಸೇರಿದಂತೆ ಹಲವು ಗಣ್ಯರಿಗೆ ಪದ್ಮ ಪ್ರಶಸ್ತಿ

ಬುಧವಾರ, 25 ಜನವರಿ 2017 (15:54 IST)
ನವದೆಹಲಿ: ಈ ಸಾಲಿನ ಪದ್ಮ ಶ್ರೀ,  ಪದ್ಮ ಭೂಷಣ ಹಾಗೂ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟಗೊಂಡಿದ್ದು,  ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರತಿಷ್ಠಿತ ಪ್ರಶಸ್ತಿ ಒಲಿದಿದೆ.

 
ಪದ್ಮ ಪ್ರಶಸ್ತಿ ಪಡೆದ ಕ್ರೀಡಾಳುಗಳ ಪೈಕಿ ಕ್ರಿಕೆಟಿಗ ವಿರಾಟ್ ಕೊಹ್ಲಿ,  ಒಲಿಂಪಿಕ್ ಕಂಚಿನ ಪದಕ ವಿಜೇತೆ ಕುಸ್ತಿ ಪಟು ಸಾಕ್ಷಿ ಮಲಿಕ್, ಜಿಮ್ನಾಸ್ಟಿಕ್ ತಾರೆ ದೀಪಾ ಕುರ್ಮಾಕರ್ ಸೇರಿದ್ದಾರೆ.  ಈ ಮೂಲಕ ಪದ್ಮ ಪ್ರಶಸ್ತಿ ಪಡೆದ ಮೊದಲ ಮಹಿಳಾ ಕುಸ್ತಿ ಪಟು ಎನ್ನುವ ಗೌರವಕ್ಕೆ ಸಾಕ್ಷಿ ಪಾತ್ರರಾದರು.

ಇವರಲ್ಲದೆ ಮನರಂಜನೆ ಕ್ಷೇತ್ರದಲ್ಲಿ ಗಾಯಕ ಕೈಲಾಶ್ ಖೇರ್, ಅನುರಾಧ ಪೌದ್ವಾಲ್,  ಮಾಸ್ಟರ್ ಚೆಫ್ ಸಂಜೀವ್ ಕಪೂರ್ ಮುಂತಾದ ಪ್ರಮುಖರು ಈ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ