ಚೆಸ್ ಪಟು ವಿಶ್ವನಾಥನ್ ಆನಂದ್‌ಗೆ ಹೃದ್ಯನಾಥ್ ಪ್ರಶಸ್ತಿ ಪುರಸ್ಕಾರ

ಮಂಗಳವಾರ, 5 ಏಪ್ರಿಲ್ 2016 (17:18 IST)
ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ಆಗಿರುವ ವಿಶ್ವನಾಥನ್ ಆನಂದ್ ಅವರಿಗೆ ಹೃದಯ್‌ನಾಥ್ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಜೀವನದ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾದ ವ್ಯಕ್ತಿಗಳನ್ನು ಗುರುತಿಸಿ ಇದು ಸನ್ಮಾನಿಸುತ್ತದೆ.  ಈ ಗೌರವವು 2 ಲಕ್ಷ ರೂ. ನಗದು ಪ್ರಶಸ್ತಿ ಮತ್ತು ಸ್ಮಾರಕವನ್ನು ಒಳಗೊಂಡಿದೆ. 
 
ಮಹಾರಾಷ್ಟ್ರ ರಾಜ್ಯಪಾಲ ಸಿ.ವಿದ್ಯಾಸಾಗರ ರಾವ್ ಏಪ್ರಿಲ್ 12ರಂದು ನಡೆಯುವ ಸಮಾರಂಭದಲ್ಲಿ 46 ವರ್ಷದ ಚೆಸ್ ಕ್ರೀಡಾಪಟುವಿಗೆ ಪ್ರಶಸ್ತಿ ನೀಡಿ ಪುರಸ್ಕರಿಸಲಿದ್ದಾರೆ.
 
ಮುಂಚೆ ಪ್ರಶಸ್ತಿ ಸ್ವೀಕರಿಸಿದವರಲ್ಲಿ ಗಣ್ಯ ವ್ಯಕ್ತಿಗಳಾದ ಲತಾ ಮಂಗೇಶ್ಕರ್, ಬಾಬಾಸಾಹೇಬ್ ಪುರಂದರೆ, ಆಶಾ ಭೋಂಸ್ಲೆ, ಅಮಿತಾಬ್ ಬಚ್ಚನ್, ಹರಿಪ್ರಸಾದ್ ಚೌರಾಸಿಯಾ ಮತ್ತು ಎ.ಆರ್. ರೆಹ್ಮಾನ್. 
 
ಈ ಸಮಾರಂಭಕ್ಕೆ ಮಹಾರಾಷ್ಟ್ರ ಸಂಸ್ಕೃತಿ ಸಚಿವ ವಿನೋದ್ ತಾವ್ಡೆ ಮತ್ತು ಪಂಡಿತ್ ಹೃದಯ್ ನಾಥ್ ಮಂಗೇಶ್ಕರ್ ಗೌರವ ಅತಿಥಿಗಳಾಗಿದ್ದು, ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ವಿಶೇಷ ಅತಿಥಿಯಾಗಲಿದ್ದಾರೆ. 
 
 1969ರ ಡಿ. 11ರಂದು ಜನಿಸಿದ ಆನಂದ್ ಭಾರತೀಯ ಚೆಸ್ ಗ್ರಾಂಡ್‌ಮಾಸ್ಟರ್ ಮತ್ತು ಮಾಜಿ ವಿಶ್ವ ಚಾಂಪಿಯನ್. 1988ರಲ್ಲಿ ಅವರು ಭಾರತದ ಪ್ರಥಮ ಗ್ರಾಂಡ್‌ಮಾಸ್ಟರ್ ಆಗಿದ್ದರು. 2000ದಿಂದ 2002ರವರೆಗೆ ಎಫ್‌ಐಡಿಇ ವಿಶ್ವ ಚೆಸ್ ಚಾಂಪಿಯನ್ ಷಿಪ್ ಹೊಂದಿದ್ದರು ಮತ್ತು 2007ರಲ್ಲಿ ಅವಿರೋಧ ವಿಶ್ವಚಾಂಪಿಯನ್ ಆಗಿದ್ದರು. 

ವೆಬ್ದುನಿಯಾವನ್ನು ಓದಿ