ರಿಯೊ ಒಲಿಂಪಿಕ್ಸ್‌ಗೆ ಚೊಚ್ಚಲ ಪ್ರವೇಶ ಪಡೆದ ದೀಪಾ ಕರ್ಮಾಕರ್

ಬುಧವಾರ, 20 ಜುಲೈ 2016 (17:08 IST)
ಭಾರತ ರಿಯೊ ಒಲಿಂಪಿಕ್ಸ್‌ಗೆ ಅತೀ ದೊಡ್ಡ ತಂಡವನ್ನು ಕಳಿಸುತ್ತಿದ್ದು, ಇವರ ಪೈಕಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚೊಚ್ಚಲ ಪ್ರವೇಶ ಪಡೆದಿರುವ ಅಥ್ಲೀಟ್‌ಗಳು ಸಹ ಇದ್ದಾರೆ. ಇವರ ಪೈಕಿ ಕ್ರೀಡಾಕೂಟದಲ್ಲಿ ತಮ್ಮ ಛಾಪು ಮೂಡಿಸಲು ಸಿದ್ಧರಾಗಿರುವ ಕೆಲವರತ್ತ ಗಮನಹರಿಸೋಣ.
 
ಚೊಚ್ಚಲ ಅಥ್ಲೀಟ್‌ಗಳ ಪಟ್ಟಿಯಲ್ಲಿ ದೀಪಾ ಕರ್ಮಾಕರ್ ಟಾಪ್‌ನಲ್ಲಿದ್ದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಜಿಮ್ನಾಸ್ಟ್ ಆಗಿದ್ದಾರೆ. 52 ವರ್ಷಗಳ ಬಳಿಕ ಮೆಗಾ ಈವೆಂಟ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯಳಾಗಿದ್ದಾಳೆ. 22 ವರ್ಷದ ಅಥ್ಲೀಟ್ 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಅಪರೂಪದ ಅಪಾಯಕಾರಿ ಪ್ರೊಡುನೋವಾ ವಾಲ್ಟ್ ಪ್ರಯತ್ನಿಸುವ ಮೂಲಕ ಜಗತ್ತಿಗೆ ಆಘಾತ ಉಂಟುಮಾಡಿದ್ದರು. ಗ್ಲಾಸ್ಗೊನಲ್ಲಿ ಈ ಕಸರತ್ತಿಗಾಗಿ ದೀಪಾ ಕಂಚಿನ ಪದಕ ಗೆದ್ದಿದ್ದರು.
 
 ದೀಪಾ ಜಗತ್ತಿನಲ್ಲಿ ಪ್ರುಡುನೋವಾ ಕಸರತ್ತು ನಿರ್ವಹಿಸುವ ಮೂವರು ಮಹಿಳೆಯರಲ್ಲಿ ಒಬ್ಬರಾಗಿದ್ದು, ವಾಸ್ತವವಾಗಿ ಅತ್ಯಧಿಕ ಸ್ಕೋರನ್ನು ದಾಖಲಿಸಿದ್ದರು. ಅಂತಾರಾಷ್ಟ್ರೀಯ ಜಿಮ್ನಾಸ್ಟಿಕ್ಸ್ ಫೆಡರೇಷನ್ ಅವರನ್ನು ವಿಶ್ವ ದರ್ಜೆಯ ಜಿಮ್ನಾಸ್ಟ್ ಎಂದು ಕರೆದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ