ವಾಟರ್ ಟ್ಯಾಂಕ್ ಡ್ರೈವರ್ ಮಿ. ಏಷ್ಯಾ ಆದಾಗ!

ಶುಕ್ರವಾರ, 28 ಅಕ್ಟೋಬರ್ 2016 (11:00 IST)
ಬೆಂಗಳೂರು: ಕಟ್ಟು ಮಸ್ತು ದೇಹ... ಕಬ್ಬಿಣದಂತ ಕೈಗಳು.. ನೀಳ ದೇಹ.. ಹೌದು ಹೀಗೆ ಕೈಯಲ್ಲಿ ಟ್ರೋಫಿ ಹಿಡಿದು ನಿಂತಿರೋ ಈತನ ಹೆಸರು ಜಿ.ಬಾಲಕೃಷ್ಣ.. ಕಷ್ಟದಲ್ಲಿದ್ದುಕೊಂಡೇ ಏನಾದ್ರೂ ಸಾಧನೆ ಮಾಡಬೇಕು ಅನ್ನೋ ತುಡಿತ ಈತನದ್ದು, ಹೀಗಾಗಿ ಈತ ಏನೇ ಮಾಡಿದರೂ ನಾನು ಬಾಡಿ ಬಿಲ್ಡಿಂಗ್ನಲ್ಲೇ ಸಾಧನೆ ಮಾಡ್ತೇನೆ ಅನ್ನೋ ಧೈರ್ಯ. ಇದೀಗ ಇದೇ 25ರ ಹುಡುಗ ಮಿ.ಏಷ್ಯಾ ಆಗಿ ಹೊರಹೊಮ್ಮಿದ್ದಾನೆ.

5ನೇ ಏಷ್ಯನ್ ಬಾಡಿ ಬಿಲ್ಡಿಂಗ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿ ಟ್ರೋಫಿ ಗೆದ್ದು ಬಂದಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸೋ ಬಾಲಕೃಷ್ಣ, ಇದೆಲ್ಲ ಸಾಧನೆಗೆ ನನ್ನ ತಾಯಿ ಪಾರ್ವತಮ್ಮ ಹಾಗೂ ನನ್ನ ಸಹೋದರ ರಾಜೇಶ ಕಾರಣ ಅವರಿಂದಲೇ ನಾನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂದಿದ್ದಾನೆ.
 
ಬೆಂಗಳೂರಿನ ವೈಟ್ ಫಿಲ್ಡಲ್ಲಿ 2010ರಿಂದ ವಾಟರ್ ಟ್ಯಾಂಕ್ ಡ್ರೈವರ್ ಆಗಿ ಕೆಲಸ ಮಾಡ್ತಿರೋ ಬಾಲಕೃಷ್ಣನಿಗೆ ಮೊದಲಿಂದ್ಲೂ ದೇಹಾದಾಢ್ರ್ಯ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಅನ್ನೂ ಆಸೆ. ಅದರಂತೆ ತನ್ನದೇ ಆದ ಜೀಮ್ ಕೂಡಾ ತೆರದಿದ್ದ. ರಾಮಗೊಂಡನಹಳ್ಳಿಯ ವರ್ತೂರಿನಲ್ಲಿ ಈತನ ಮನೆ.
 
ಮೊದಲಿಂದ್ಲೂ ಅರ್ನಾಲ್ಡ್  ಅವರ ಅಪ್ಪಟ್ಟ ಅಭಿಮಾನಿಯಾಗಿರೋ ಬಾಲಕೃಷ್ಣ , ಬಾಡಿ ಬಿಲ್ಡಿಂಗ್ಗಾಗಿ ಮುಂಬೈ ಹಾಗೂ ಪಂಜಾಬ್ನಲ್ಲಿ ಟ್ರೇನಿಂಗ್ ಪಡೆದಿದ್ದಾನೆ. ಅಲ್ಲದೇ ಹಲವಾರು ಕಾಂಪಿಟೇಷನ್ನಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
 
ಇನ್ನು ಬಾಲಕೃಷ್ಣ ಅವರ ಡಯಟ್ ಕೇಳಿದ್ರೆ ಹೌಹಾರ್ತಿರಾ. ನಿತ್ಯ 750 ಗ್ರಾಂ ಚಿಕನ್, 25 ಮೊಟ್ಟೆ, 300 ಗ್ರಾಂ ಅನ್ನ, 200 ಗ್ರಾ ತರಕಾರಿ ಇವರ ನಿತ್ಯದ ಊಟದ ಮೆನ್ಯೂ.
 
ಸಾಧನೆ ಬಗ್ಗೆ ಹೇಳ್ಬೇಕಂದ್ರೆ, 2013 ರಲ್ಲಿ ಜರ್ಮನಿಯಲ್ಲಿ ನಡೆದ ಜ್ಯೂನಿಯರ್ ಮಿ. ಯುನಿವರ್ಸಲ್, ಹಾಗೂ ಅಥೆನ್ಸ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಸಾಧನೆ ಮಾಡಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ