ಫಿನಿಷಿಂಗ್ ಗೆರೆಯ ಬಳಿ ಡೈವ್ ಹೊಡೆದು 400 ಮೀ. ಚಿನ್ನ ಗೆದ್ದ ಶಾನೆ ಮಿಲ್ಲರ್

ಮಂಗಳವಾರ, 16 ಆಗಸ್ಟ್ 2016 (13:35 IST)
ರಿಯೊ ಡಿ ಜನೈರೊ: ಒಲಿಂಪಿಕ್ಸ್‌ನಲ್ಲಿ ವಿಚಿತ್ರ ಸಂಗತಿಗಳು ಜರುಗುತ್ತವೆ. ವಿಶೇಷವಾಗಿ ರನ್ನಿಂಗ್ ರೇಸ್‌ಗಳಲ್ಲಿ ಫಲಿತಾಂಶಗಳು ಕೆಲವೇ ಸೆಕೆಂಡುಗಳ ಅಂತರದಲ್ಲಿ ನಿರ್ಧರಿಸಲಾಗುತ್ತದೆ.

ಇಂತಹ ಘಟನೆಯೊಂದರಲ್ಲಿ ಮಹಿಳೆಯರ 400 ಮೀ ಫೈನಲ್ ಓಟದಲ್ಲಿ  ಅಮೆರಿಕದ ಆಲಿಸನ್ ಫೆಲಿಕ್ಸ್ ಅವರನ್ನು ಚಿನ್ನದ ಪದಕ ಗೆಲ್ಲುವುದರಿಂದ ತಪ್ಪಿಸಿದ ಬಹಾಮಾಸ್ ಶಾನೆ ಮಿಲ್ಲರ್ ಫಿನಿಷಿಂಗ್ ಲೈನ್ ಬಳಿ ಕೊನೆಯ ಕ್ಷಣದಲ್ಲಿ ಡೈವ್ ಹೊಡೆದು ಅಗ್ರಸ್ಥಾನ ಗಳಿಸಿ ಚಿನ್ನ ಗೆದ್ದಿದ್ದಾರೆ.
 
ಫೆಲಿಕ್ಸ್ ಈ ಓಟ ಗೆದ್ದಿದ್ದರೆ ಅದು ಅವರ ಐದನೇ ಒಲಿಂಪಿಕ್ ಚಿನ್ನದ ಪದಕವಾಗುತ್ತಿತ್ತು. ಟಾಪ್ ಇಬ್ಬರು ರೇಸರ್‌ಗಳ ನಡುವೆ ಅಂತರ ಕೆಲವೇ ಸೆಕೆಂಡುಗಳಾಗಿದ್ದು, ಮಿಲ್ಲರ್ 49.44 ಸೆ.ಗಳಲ್ಲಿ ಗುರಿಮುಟ್ಟಿದರು ಮತ್ತು ಫೆಲಿಕ್ಸ್ 49.51 ಸೆ.ಗಳಲ್ಲಿ ಗುರಿಮುಟ್ಟಿದರು. ಜಮೈಕಾದ ಶೆರಿಕಾ ಜಾಕ್ಸನ್ 49.75 ಸೆಕೆಂಡುಗಳಲ್ಲಿ ಗುರಿಮುಟ್ಟಿ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಗೆದ್ದರು. 
 
 

ವೆಬ್ದುನಿಯಾವನ್ನು ಓದಿ