ಸೈನಾ ನೆಹ್ವಾಲ್ ಸಿನಿಮಾದ ನಾಯಕಿ ಯಾರು ಗೊತ್ತೇ?

ಬುಧವಾರ, 26 ಏಪ್ರಿಲ್ 2017 (11:15 IST)
ಮುಂಬೈ: ಭಾರತದ ಬ್ಯಾಡ್ಮಿಂಟನ್ ನಲ್ಲಿ ಹೊಸ ಸಂಚಲನ ಮೂಡಿಸಿದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಜೀವನಾಧಾರಿತ ಸಿನಿಮಾವೊಂದು ಬರಲಿದೆ. ಇದರಲ್ಲಿ ಸೈನಾ ಪಾತ್ರ ವಹಿಸುವುದು ಯಾರು ಗೊತ್ತೇ?

 
ಹಿಂದೊಮ್ಮೆ ಸ್ವತಃ ಸೈನಾ ನನ್ನ ಕುರಿತಾದ ಸಿನಿಮಾ ಬಂದರೆ ದೀಪಿಕಾ ಪಡುಕೋಣೆ ನನ್ನ ಪಾತ್ರ ನಿಭಾಯಿಸಬೇಕು ಎಂದು ಮನದಾಸೆ ಹೊರಹಾಕಿದ್ದರು. ಆದರೆ ಇದೀಗ ಸೈನಾ ಪಾತ್ರ ನಿರ್ವಹಿಸುತ್ತಿರುವುದು ದೀಪಿಕಾ ಅಲ್ಲ. ಶ್ರದ್ಧಾ ಕಪೂರ್.

ಹಾಫ್ ಗರ್ಲ್ ಫ್ರೆಂಡ್ ಚಿತ್ರದಲ್ಲಿ ಬಾಸ್ಕೆಟ್ ಬಾಲ್ ಆಟಗಾರ್ತಿಯಾಗಿ ಕಾಣಿಸಿಕೊಂಡಿದ್ದ ಶ್ರದ್ಧಾ ಇಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿಯಾಗಲಿದ್ದಾಳೆ. ಥೇಟ್ ಸೈನಾರದ್ದೇ ಹೋಲಿಕೆಯಿರುವ ಈಕೆ ಅವರ ಪಾತ್ರಕ್ಕೆ ಹೇಳಿ ಮಾಡಿಸಿದ ನಟಿ.

ಸೈನಾ ಜೀವನದ ಬಗ್ಗೆ ಸಾಕಷ್ಟು ರಿಸರ್ಚ್ ಮಾಡಿ ನಿರ್ದೇಶಕರು ಸಿನಿಮಾ ಮಾಡಲು ಹೊರಟಿದ್ದಾರೆ. ಶ್ರದ್ಧಾ ಕೂಡಾ ಮಾಜಿ ವಿಶ್ವ ನಂ.1 ಆಟಗಾರ್ತಿಯ ಪಾತ್ರ ಮಾಡಲು ಸಕಲ ರೀತಿಯಲ್ಲಿ ಸಜ್ಜಾಗುತ್ತಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ