ವಿಂಬಲ್ಡನ್ 2016: ಜೋಕೋವಿಕ್ ಸೋಲಿನಿಂದ ನಿಟ್ಟುಸಿರುಬಿಟ್ಟ ರೋಜರ್ ಫೆಡರರ್

ಬುಧವಾರ, 6 ಜುಲೈ 2016 (16:35 IST)
ವಿಂಬಲ್ಡನ್ 2016ರಿಂದ ನೋವಾಕ್ ಜೋಕೋವಿಕ್ ಆರಂಭದಲ್ಲೇ ನಿರ್ಗಮಿಸಿದ್ದಕ್ಕೆ ತಾವು ನಿಟ್ಟುಸಿರು ಬಿಟ್ಟಿರುವುದಾಗಿ ಸ್ವಿಸ್ ಲೆಜೆಂಡ್ ರೋಜರ್ ಫೆಡರರ್ ಹೇಳಿದ್ದಾರೆ.
 
ಗ್ರಾಂಡ್ ಸ್ಲಾಮ್‌ಗಳಲ್ಲಿ ಇತ್ತೀಚೆಗೆ ಯಶಸ್ಸಿನ ಶೃಂಗದಲ್ಲಿರುವ ವ್ಯಕ್ತಿಯನ್ನು ಎದುರಿಸುವ ಸಾಧ್ಯತೆ ಇಲ್ಲದಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ ಎಂದು ಫೆಡರರ್ ಪ್ರತಿಕ್ರಿಯಿಸಿದರು.
 
ಇನ್ನೂ ಸುದೀರ್ಘ ಪ್ರಯಾಣವಿದೆ. ಆದರೆ ಜೋಕೊವಿಕ್ ಸೋಲಿನಿಂದ ಎಲ್ಲರೂ ನಿಟ್ಟುಸಿರುಬಿಡುವಂತಾಗಿದೆ ಎಂದು ಹೇಳಿದರು.
ಅಚ್ಚರಿಯ ಫಲಿತಾಂಶದಲ್ಲಿ ಜೋಕೋವಿಕ್‌ ಮೂರನೇ ಸುತ್ತಿನಲ್ಲಿ ಸ್ಯಾಮ್ ಕ್ವೆರಿ ಕೈಯಲ್ಲಿ ಸೋಲಪ್ಪಿದ್ದರು.  ಫೆಡರರ್ ಕ್ವಾರ್ಟರ್ ಫೈನಲ್‌ನಲ್ಲಿ ಮಾರಿನ್ ಸಿಲಿಕ್ ಅವರನ್ನು ಎದುರಿಸಲಿದ್ದಾರೆ. ವಿಂಬಲ್ಡನ್‌ನ ಎರಡು ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಜೋಕೋವಿಕ್ ಕೈಯಲ್ಲಿ ಸೋತಿದ್ದ ಸಿಲಿಕ್ ಕೂಡ ಜೋಕೊವಿಕ್ ನಿರ್ಗಮನದಿಂದ ಹರ್ಷಿತರಾಗಿದ್ದಾರೆ.
 
ಟೆನ್ನಿಸ್ ಲೆಜೆಂಡ್ ನೋವಾಕ್ ಜೋಕೊವಿಕ್ ಉದಯೋನ್ಮುಖ ಟೆನ್ನಿಸ್ ತಾರೆ ಸ್ಯಾಮ್ ಕ್ವೆರಿ ಜತೆ ಸೆಣೆಸಾಟದಲ್ಲಿ ಸೋಲಪ್ಪುವ ಮೂಲಕ ಅವರ ಗ್ರಾಂಡ್ ಸ್ಲಾಮ್ ಗೆಲುವಿನ ಸರಣಿಗೆ ಬ್ರೇಕ್ ಬಿದ್ದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ