ಕ್ರೀಡಾ ಸ್ಪೂರ್ತಿ: ಬೆಳ್ಳಿ ಪದಕ ನಿರಾಕರಿಸಿದ ಯೋಗೇಶ್ವರ್

ಬುಧವಾರ, 31 ಆಗಸ್ಟ್ 2016 (16:05 IST)
2012ರ ಲಂಡನ್ ಓಲಂಪಿಕ್ಸ್‌ನಲ್ಲಿ ಕುಸ್ತಿ ಪಟು ಯೋಗೇಶ್ವರ್ ಗೆದ್ದಿದ್ದ ಕಂಚಿನ ಪದಕ ಬೆಳ್ಳಿ ಪದಕಕ್ಕೆ ಬಡ್ತಿ ಹೊಂದುತ್ತಿರುವ ಬಗ್ಗೆ ಕೇಳಿರುತ್ತೀರಿ. ಆದರೆ ಯೋಗೇಶ್ವರ್ ಬೆಳ್ಳಿ ಪದಕವನ್ನು ನಯವಾಗಿ ನಿರಾಕರಿಸುವ ಮೂಲಕ ಅಗಲಿದ ಆಟಗಾರನಿಗೆ ಗೌರವವನ್ನು ಸಮರ್ಪಿಸಿದ್ದಾರೆ. 

ಈ ಕುರಿತು ಯೋಗೇಶ್ವರ್ ಈ ಮುಂದಿನಂತೆ ಟ್ವೀಟ್ ಮಾಡಿದ್ದಾರೆ. 
 
"ಬೆಸಿಕ್ ಮಹಾನ್ ಆಟಗಾರರಾಗಿದ್ದರು. ಮೃತ್ಯುವಿನ ನಂತರ ಅವರು ಡೋಪ್ ಟೆಸ್ಟ್ ನಲ್ಲಿ ಫೇಲ್ ಆಗಿದ್ದಕ್ಕೆ ನೋವಿದೆ. ಒಬ್ಬ ಆಟಗಾರನಾಗಿ ಅವರ ಬಗ್ಗೆ ಗೌರವವಿದೆ".
 
"ಸಾಧ್ಯವಾದರೆ ಆ ಪದಕವನ್ನು ಬೆಸಿಕ್ ಕುಡ್ಕೋವ್ ಕುಟುಂಬದ ಬಳಿಯೇ ಇರಲಿ. ಇದು ಅವರ ಕುಟುಂಬಕ್ಕೆ ಕೊಟ್ಟ ಗೌರವವೆನಿಸುವುದು. ನನಗೆ ಮಾನವೀಯ ಸಂವೇದನೆಯೇ ಎಲ್ಲಕ್ಕಿಂತ ಮುಖ್ಯ".
 
ಎಂದು ಅವರು ಟ್ವೀಟ್ ಮಾಡಿದ್ದಾರೆ. 
 
2012ರ ಓಲಂಪಿಕ್ಸ್‌ನ 60 ಕೆಜಿ ಫ್ರಿಸ್ಟೈಲ್ ವಿಭಾಗದಲ್ಲಿ ಯೋಗೇಶ್ವರ್ ಕಂಚನ್ನು ಗೆದ್ದಿದ್ದರು. ಪಂದ್ಯಾವಳಿಯಲ್ಲಿ ಬೆಳ್ಳಿ ಗೆದ್ದಿದ್ದ ರಷ್ಯಾದ ಕುಸ್ತಿ ಪಟು ಬೆಸಿಕ್ ಕುಡ್ಕೋವ್ ಬಳಿಕ ಅಪಘಾತವೊಂದರಲ್ಲಿ ಮೃತರಾಗಿದ್ದರು. ಇತ್ತೀಚಿಗೆ ಬೆಸಿಕ್ ಉದ್ದೀಪನ ಸೇವಿಸಿದ್ದು ಸಾಬೀತಾಗಿದ್ದರಿಂದ ಅವರು ಪಡೆದಿದ್ದ ಬೆಳ್ಳಿ ಪದಕವನ್ನು ಹಿಂಪಡೆಯಲು ನಿರ್ಧರಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ