3 ರನ್‌ಗಳಿಂದ ಜಿಂಬಾಬ್ವೆಗೆ ಸೋಲು: ಭಾರತಕ್ಕೆ 2-1ರಿಂದ ಸರಣಿ ಜಯ

ಬುಧವಾರ, 22 ಜೂನ್ 2016 (20:11 IST)
ಭಾರತ ಮತ್ತು ಜಿಂಬಾಬ್ವೆ ನಡುವೆ ನಡೆದ ರೋಚಕ ಪಂದ್ಯದಲ್ಲಿ ಜಿಂಬಾಬ್ವೆ 3 ರನ್‌ಗಳಿಂದ ವಿರೋಚಿತ ಸೋಲನ್ನಪ್ಪುವ ಮೂಲಕ ಭಾರತದ ವಿರುದ್ಧ ಸರಣಿಯನ್ನು 2-1ರಿಂದ ಸೋತಿದೆ. 
 
ಭಾರತ ಮತ್ತು ಜಿಂಬಾಬ್ವೆ ನಡುವೆ ಕೊನೆಯ ಟಿ 20 ನಿರ್ಣಾಯಕ ಪಂದ್ಯದಲ್ಲಿ ಹಣಾಹಣಿ ಹೋರಾಟ ನಡೆಯಿತು. ಭಾರತ ಸಾಧಾರಣ ಮೊತ್ತವಾದ  138 ರನ್ ಗಳಿಸುವ ಮೂಲಕ ಜಿಂಬಾಬ್ವೆಗೆ ಗೆಲ್ಲುವ ಭರವಸೆ ಮೂಡಿಸಿತ್ತು. ಜಿಂಬಾಬ್ವೆಗೆ ಕೊನೆಯ ಎಸೆತದಲ್ಲಿ ಗೆಲ್ಲುವುದಕ್ಕೆ ಬೌಂಡರಿ ಅಗತ್ಯವಿತ್ತು. ಎರಡೂ ತಂಡದಲ್ಲಿ ಆತಂಕದ ಛಾಯೆ ಕವಿದಿತ್ತು.

 ಆದರೆ ಕೊನೆಯ ಎಸೆತದಲ್ಲಿ ಚಿಗುಂಬರಾ ಬರೀಂದರ್ ಸ್ರಾನ್ ಬೌಲಿಂಗ್‌ನಲ್ಲಿ ಚಹಲ್‌ಗೆ ಕ್ಯಾಚಿತ್ತು ಔಟಾಗಿದ್ದರಿಂದ ಭಾರತ ಗೆಲುವಿನ ನಗೆ ಬೀರಿತು. ಇದರಿಂದ ಭಾರತ ಸರಣಿಯನ್ನು 2-1ರಿಂದ ಗೆದ್ದುಕೊಂಡು ನೆಮ್ಮದಿಯಿಂದ ಜಿಂಬಾಬ್ವೆಯಿಂದ ನಿರ್ಗಮಿಸಲಿದೆ.

 
ಮೊದಲಿಗೆ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಪರ ಮಂದೀಪ್ ಸಿಂಗ್ ಕೇವಲ 4 ರನ್‌ಗೆ ಔಟಾದ ಬಳಿಕ ಮನೀಶ್ ಪಾಂಡೆ ಕೂಡ ದುರದೃಷ್ಟವಶಾತ್ ರನೌಟ್ ಆದರು.  ಕೇದಾರ್ ಜಾದರ್ ಬಿರುಸಿನ 42 ಎಸೆತಗಳಲ್ಲಿ 52 ರನ್ ಸ್ಕೋರ್ ಮಾಡಿದರು. ಅವರ ಸ್ಕೋರಿನಲ್ಲಿ 7 ಬೌಂಡರಿ ಮತ್ತು ಒಂದು  ಸಿಕ್ಸರ್ ಇತ್ತು. ಜಿಂಬಾಬ್ವೆ ಪರ ಡೊನಾಲ್ಡ್ ತಿರಿಪಾನೊ 3 ವಿಕೆಟ್ ಕಬಳಿಸಿದರು. ಮಂದೀಪ್ ಸಿಂಗ್, ಧೋನಿ ಮತ್ತು ಕೇದಾರ್ ಜಾದವ್ ತಿರಿಪಾನೊಗೆ ಬಲಿಯಾದರು.

ಇದಕ್ಕೆ ಉತ್ತರವಾಗಿ ಜಿಂಬಾಬ್ವೆ ತಂಡ 6  ವಿಕೆಟ್‌ಗೆ 135 ರನ್ ಮಾತ್ರ ಗಳಿಸಿ 3 ರನ್ ಅಂತರದಿಂದ ಸೋಲಪ್ಪಿತು.   ಭಾರತದ ಪರ ಸ್ರಾನ್, ಕುಲಕರ್ಣಿ ತಲಾ ಎರಡು ವಿಕೆಟ್ ಮತ್ತು ಅಕ್ಸರ್ ಪಟೇಲ್ ಮತ್ತು ಚಹಲ್ ತಲಾ ಒಂದು ವಿಕೆಟ್ ಕಬಳಿಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ