ಮಹಿಳಾ ವಿಶ್ವಕಪ್‌: ಹರ್ಮನ್‌ಪ್ರೀತ್‌ ಬಳಗಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ

Sampriya

ಭಾನುವಾರ, 13 ಅಕ್ಟೋಬರ್ 2024 (10:00 IST)
Photo Courtesy X
ಶಾರ್ಜಾ:  ಮಹಿಳೆಯರ ಟಿ20 ವಿಶ್ವಕಪ್‌ ಕೊನೆಯ ಲೀಗ್ ಪಂದ್ಯದಲ್ಲಿ ಇಂದು ಭಾರತ ತಂಡವು ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಸೆಮಿಫೈನಲ್‌ಗೆ ಪ್ರವೇಶ ಪಡೆಯುವ ನಿಟ್ಟಿನಲ್ಲಿ ಭಾರತಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ ಇದಾಗಿದೆ.

ಎ ಗುಂಪಿನಲ್ಲಿರುವ ಭಾರತ ನ್ಯೂಜಿಲೆಂಡ್ ಎದುರು ಆರಂಭದ ಪಂದ್ಯ ಸೋತಿತ್ತು. ನಂತರ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡವನ್ನು ಬಗ್ಗು ಬಡಿದಿತ್ತು.  ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ನಾಲ್ಕರ ಘಟ್ಟದ ಪ್ರವೇಶಕ್ಕಾಗಿ ನ್ಯೂಜಿಲೆಂಡ್ ಜೊತೆ ಪೈಪೋಟಿಯಲ್ಲಿದೆ.

ಆಸ್ಟ್ರೇಲಿಯಾ ತಂಡವು ಆಡಿರುವ ಮೂರು ಪಂದ್ಯಗಳಿಂದ ಆರು ಪಾಯಿಂಟ್ಸ್ ಸಂಗ್ರಹಿಸಿ ಸೆಮಿಫೈನಲ್‌ ಖಚಿತಪಡಿಸಿದೆ. ಗುಂಪಿನಿಂದ ಎರಡನೇ ತಂಡವಾಗಿ ಸೆಮಿಫೈನಲ್ ಸ್ಥಾನ ಪಡೆಯಲು ಭಾರತ, ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ತಂಡಗಳ ನಡುವೆ ಸ್ಪರ್ಧೆಯಿದೆ.

ಪಾಕಿಸ್ತಾನ ತನ್ನ ಕೊನೆಯ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದು, ಆ ಪಂದ್ಯದಲ್ಲಿ ಪಾಕ್ ಗೆದ್ದರೆ ಮತ್ತು ಭಾರತವು, ಆಸ್ಟ್ರೇಲಿಯಾ ಎದುರು ಸೋತಲ್ಲಿ ಮೂರು ತಂಡಗಳ ನಡುವೆ ಸೆಮಿಫೈನಲ್ ಪೈಪೋಟಿ ಏರ್ಪಡಲಿದೆ. ಆಗ ನಿವ್ವಳ ರನ್ ದರ ನಿರ್ಣಾಯಕವಾಗಲಿದೆ.

ಹರ್ಮನ್‌ಪ್ರೀತ್ ಬಳಗ, ಕೊನೆಯ ಗೆಲುವಿಗೆ ತೀವ್ರ ಪ್ರಯತ್ನ ನಡೆಸಬೇಕಾಗಿದೆ. ಜೊತೆಗೆ ನ್ಯೂಜಿಲೆಂಡ್‌ ಮಹಿಳೆಯರಿಂದ ಸಂಭವನೀಯ ಅಪಾಯ ನಿವಾರಿಸಲು ರನ್‌ರೇಟ್‌ ಕೂಡ ಸುಧಾರಿಸಬೇಕಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ