ಮುಂದಿನ ಬಾರಿ ಬೇರೆ ಫ್ರಾಂಚೈಸಿ ನೋಡ್ಕೊಳ್ಳಿ: ವಾರ್ನರ್ ಗೆ ಫ್ಯಾನ್ಸ್ ಸಲಹೆ

ಮಂಗಳವಾರ, 5 ಅಕ್ಟೋಬರ್ 2021 (11:15 IST)
ದುಬೈ: ಸನ್ ರೈಸರ್ಸ್ ಹೈದರಾಬಾದ್ ಮಾಜಿ ನಾಯಕ ಡೇವಿಡ್ ವಾರ್ನರ್ ರನ್ನು ನಡೆಸಿಕೊಳ್ಳುತ್ತಿರುವ ರೀತಿಯಿಂದ ಅಬಿಮಾನಿಗಳು ತೀವ್ರ ಬೇಸರಗೊಂಡಿದ್ದಾರೆ.


ವಾರ್ನರ್ ಕಳಪೆ ಫಾರ್ಮ್ ನೆಪವೊಡ್ಡಿ ಹೈದರಾಬಾದ್ ಅವರನ್ನು ಆಡುವ ಬಳಗದಿಂದ ಹೊರಹಾಕಿರುವುದಲ್ಲದೆ, ತಂಡದ ಜೊತೆಗೆ ಮೈದಾನಕ್ಕೆ ಪ್ರವೇಶಿಸಲೂ ಬಿಟ್ಟಿಲ್ಲ. ಬದಲಾಗಿ ಹೋಟೆಲ್ ರೂಂನಲ್ಲಿಯೇ ಉಳಿದುಕೊಳ್ಳಲು ಸೂಚಿಸಿದೆ.

ಆದರೆ ಮೊನ್ನೆ ಮೊನ್ನೆ ನಡೆದ ಪಂದ್ಯದಲ್ಲಿ ವಾರ್ನರ್ ಪ್ರೇಕ್ಷಕರ ಗ್ಯಾಲರಿಯಲ್ಲಿ ಹೈದರಾಬಾದ್ ಸಮವಸ್ತ್ರ ಧರಿಸಿ, ತಂಡದ ಬಾವುಟ ಹಾರಿಸುತ್ತಾ ತಂಡಕ್ಕೆ ಸಾಮಾನ್ಯ ಪ್ರೇಕ್ಷಕರಂತೇ ಬೆಂಬಲಿಸಿದ್ದು ಅಭಿಮಾನಿಗಳಿಗೆ ನೋವು ತಂದಿದೆ. ಹೀಗಾಗಿ ಹೈದರಾಬಾದ್ ತಂಡವನ್ನು ಟೀಕಿಸಿರುವ ಅಭಿಮಾನಿಗಳು ಮುಂದಿನ ಬಾರಿ ಒಳ್ಳೆಯ ಫ್ರಾಂಚೈಸಿ ನೋಡ್ಕೊಳ್ಳಿ ಎಂದು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ