ವಿಶ್ವ ಕಪ್ ಪಂದ್ಯದಲ್ಲಿ ಗೆಲುವಿನತ್ತ ಮುನ್ನುಗ್ಗುತ್ತಿರುವ ಭಾರತ

ಭಾನುವಾರ, 15 ಫೆಬ್ರವರಿ 2015 (11:11 IST)
ಕ್ರಿಕೆಟ್ ಲೋಕದಲ್ಲಿ ಸಾಂಪ್ರಾದಾಯಿಕ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನದ ತಂಡಗಳು ಇಂದು ಆಸ್ಟ್ರೇಲಿಯಾದ ಅಡಿಲೈಡ್ ಮೈದಾನದಲ್ಲಿ ಮಹಾ ಕಾಳಗಕ್ಕಿಳಿದಿವೆ. ಐಸಿಸಿ ವಿಶ್ವಕಪ್ ಟೂರ್ನಿ 2015ರ ಎರಡನೇ ದಿನದ ಮೂರನೇ ಪಂದ್ಯ ಇದಾಗಿದ್ದು, ಇಂಡಿಯಾ-ಪಾಕ್ ಎದುರಾಳಿಗಳಾಗಿ ಆಡುತ್ತಿರುವ ಟೂರ್ನಿಯ ಮೊದಲ ಪಂದ್ಯ ಇದಾಗಿದೆ.  ಇಂದು ಜ್ಹಿಂಬಾಂಬೆ ಹಾಗೂ ದಕ್ಷಿಣ ಆಫ್ರಿಕಾ ಕೂಡ ಕಾಳಗಕ್ಕಿಲಿವೆ.

ಇನ್ನು ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದು, ಇಂಡಿಯಾ ತಂಡ ಬ್ಯಾಟಿಂಗ್‌ಗೆ ಇಳಿದಿದೆ. ಪಂದ್ಯದಲ್ಲಿ ಒಂದು ವಿಕೆಟ್ ಕಳೆದುಕೊಂಡಿರುವ ಭಾರತ 22 ಓವರ್ 3 ಬಾಲ್‌ಗೆ 117 ರನ್ ಕಲೆ ಹಾಕಿತ್ತು. ಪ್ರಸ್ತುತ 141 ರನ್ ದಾಖಲಿಸಿ ಗೆಲುವಿನತ್ತ ಮುನ್ನಡೆಯುತ್ತಿದೆ. ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಅವರ ಜೋಡಿ ಆರಂಭದಲ್ಲಿಯೇ 34 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಭಾರತ ತಂಡವು ಕೇವಲ 12 ಓವರ್‌ಗಳಲ್ಲಿ 50ರನ್ ದಾಖಲಿಸಿದ್ದು, ಇದು ಅಭಿಮಾನಿಗಳಲ್ಲಿ ಪುಳಕ ಹುಟ್ಟಿಸಿದೆ.

ಇಂಡಿಯಾ ಆಟಗಾರರ ಆಟದ ವೈಖರಿ ಅಭಿಮಾನಿಗಳನ್ನು ಕೆರಳಿಸುತ್ತಿದ್ದು, ಜಯ ಗಳಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಂಡಿಯಾ-ಪಾಕ್ ಪಂದ್ಯವು ಕ್ರಿಕೆಟ್ ಅಭಿಮಾನಿಗಳಲ್ಲಿ ಹೈವೋಲ್ಟೇಜ್ ಕ್ರಿಯೇಟ್ ಮಾಡಿದ್ದು, ಅಭಿಮಾನಿಗಳಿಂದ ಶುಭ ಹಾರೈಕೆಯ ಮಹಾಪೂರವೇ ಹರಿದಿದೆ. ಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಿಎಸ್ ಎಫ್ ಯೋಧರು ತಮ್ಮ ಕರ್ತವ್ಯದ ನಡುವೆಯೂ ಕ್ರಿಕೆಟ್ ಆಡುವ ಮೂಲಕ ಭಾರತ ತಂಡಕ್ಕೆ ಜಯ ಸಿಗಲಿ ಎಂದು ಹಾರೈಸಿದ್ದಾರೆ.

ವೆಬ್ದುನಿಯಾವನ್ನು ಓದಿ