62 ರನ್‌ಗಳ ಅಂತರದಿಂದ ದಕ್ಷಿಣ ಆಫ್ರಿಕಾಗೆ ಜಯ

ಭಾನುವಾರ, 15 ಫೆಬ್ರವರಿ 2015 (16:31 IST)
ಐಸಿಸಿ ವಿಶ್ವಕಪ್ ಕ್ರಿಕೆಟ್ ಟೂರ್ನಿ 2015ರ ಎರಡನೇ ದಿನವಾದ ಇಂದು ಮೂರನೇ ಪಂದ್ಯದಲ್ಲಿ ಜ್ಹಿಂಬಾಂಬೆ ವಿರುದ್ಧ ಅಖಾಡಕ್ಕಿಳಿದಿದ್ದ ದಕ್ಷಿಣ ಆಫ್ರಿಕಾ 339 ರನ್ ಪೇರಿಸಿ 62 ರನ್‌ಗಳ ಅಂತರದಿಂದ ಜಯಗಳಿಸಿದೆ. 
 
ಬಿ ಗುಂಪಿನ ತಂಡಗಳಲ್ಲಿರುವ ಈ ತಂಡಗಳು ಇಂದು ಹ್ಯಾಮಿಲ್‌ಟನ್‌ನ ಸೆಡ್ಡಾನ್ ಪಾರ್ಕ್ ಅಂಗಳದಲ್ಲಿ ಆಡಿದರು. ಪರಸ್ಪರವಾಗಿ ಸೆಣೆಸಾಟ ನಡೆಸಿದ ಈ ತಂಡಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಕ್ಷಣ ಕ್ಷಣವೂ ಕಿಚ್ಚೆಬ್ಬಿಸುತ್ತಿದ್ದವು. ಟಾಸ್ ಸೋತು ಮೊದಲು ಬ್ಯಾಟಿಂಗ್ ಕೈಗೆತ್ತಿಕೊಂಡ ದಕ್ಷಿಣ ಆಫ್ರಿಕಾ, 50 ಓವರ್‌ಗೆ 4 ವಿಕೆಟ್ ಕಳೆದುಕೊಂಡು ಒಟ್ಟು 339 ರನ್ ಪೇರಿಸಿ ಎದುರಾಳಿ ಜ್ಹಿಂಬಾಂಬೆಯನ್ನು ಮಣಿಸಿತು. ಇನ್ನು ಎದುರಾಳಿ ಜ್ಹಿಂಬಾಂಬೆ ಆಲ್ ಔಟ್ ಆಗುವ ಮೂಲಕ ಕೇವಲ 277ರನ್ ಪೇರಿಸಲಷ್ಟೇ ಶಕ್ತವಾಯಿತು. 
 
ಒಟ್ಟಾರೆ ದಕ್ಷಿಣ ಆಫ್ರಿಕಾ ತಂಡದಲ್ಲಿನ ಡೇವಿಡ್ ಮಿಲ್ಲರ್ ಹಾಗೂ ಜೀನ್‌ಪೌಲ್ ಡುಮಿನಿ ಅವರ ಜೊತೆಯಾಟವು ಆಕರ್ಷಕ ಬ್ಯಾಂಟಿಂಗ್ ಮಾಡಿದ್ದರಿಂದ ತಂಡದ ಜಯಕ್ಕೆ ಪ್ರಮುಖ ಕಾರಣವಾಯಿತು. ಡೇವಿಡ್ ಮಿಲ್ಲರ್ ಒಟ್ಟು 92 ಎಸೆತಗಳಲ್ಲಿ 9 ಸಿಕ್ಸ್, 7 ಫೋರ್ ಹೊಡೆಯುವ ಮೂಲಕ ಶತಕದ ಗುರಿಯನ್ನೂ ದಾಟಿಸಿ ಒಟ್ಟು 138 ರನ್ ಕಲೆ ಹಾಕಿದರು. ಇನ್ನು ಇವರ ಜೊತೆ ಆಡಿದ ಆಟಗಾರ ಜೀನ್ ಪೌಲ್, ಮೂರು ಸಿಕ್ಸ್, 9 ಫೋರ್ ಹೊಡೆದು ಒಟ್ಟು 155 ರನ್ ಪೇರಿಸಿದರು. ಈ ಮೂಲಕ ಈ ಜೋಡಿ ದಶಕವನ್ನು ದಾಟಿಸಿ ನೋಡುಗರ ಕಣ್ಣುಬ್ಬೇರಿಸುವಂತೆ ಮಾಡಿತು. ಹೀಗೆ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಿದ ಇವರು, ಕೊನೆಗೂ ಔಟ್ ಆಗದೆ ಓವರ್ ಮುಗಿದ ಹಿನ್ನೆಲೆಯಲ್ಲಿ ಪೆವಿಲಿಯನ್ ಕಡೆ ಮುಖ ಮಾಡಿದರು.  
 
ಇನ್ನು ಜ್ಹಿಂಬಾಂಬೆ ತಂಡದಲ್ಲಿ ಮೂರನೆಯ ಬ್ಯಾಟ್ಸ್ ಮನ್ ಆಗಿ ಅಂಗಳಕ್ಕ ಅಡಿ ಇಟ್ಟ ಹ್ಯಾಮಿಲ್ಟನ್ ಮಸ್ಕಾಡ್ಜಾ ಅವರು, 74 ಎಸೆತಗಳಿಗೆ ಎರಡು ಸಿಕ್ಸ್, 8 ಫೋರ್ ಹೊಡೆದು ಒಟ್ಟು 80 ರನ್ ಗಳಿಸಿದರಾದರೂ ಎದುರಾಳಿ ದಕ್ಷಿಣ ಆಫ್ರಿಕಾವನ್ನು ಮಣಿಸುವಲ್ಲಿ ತಂಡ ವಿಫಲವಾಯಿತು. ಆದರೆ ಹ್ಯಾಮಿಲ್ಟನ್ ತಂಡದಲ್ಲಿ ಉತ್ತಮ ಆಟಗಾರ ಎನಿಸಿಕೊಂಡರು. ತಂಡದ ಮೊದಲ ಬ್ಯಾಟಿಂಗ್ ಮ್ಯಾನ್ ಚಾಮು ಚಿಬ್ಬಬ್ಬಾ ಕೂಡ 82 ಎಸೆತಗಳಿಗೆ 64ರನ್ ಗಳಿಸಿ ಅರ್ಧ ಶತಕವನ್ನೂ ಮೀರಿ ತಮ್ಮ ಆಕರ್ಷಕ ವೈಖರಿಯನ್ನು ಮೆರೆದು ತಂಡದ ಎರಡನೇ ಉತ್ತಮ ಆಟಗಾರ ಎನಿಸಿದರು. ತಂಡದಲ್ಲಿ ಕೊನೆಯದಾಗಿ ಬ್ಯಾಟ್ ಹಿಡಿದ ತಫಾಡ್ಜವಾ ಕಮುಂಗೋಜಿ ಓವರ್ ಮುಕ್ತಾಯವಾಗಿದ್ದ ಹಿನ್ನೆಲೆಯಲ್ಲಿ ಆಟ ಮುಂದುವರಿಸಲಾಗದೆ, ಔಟಾಗದೆ ಶೂನ್ಯ ಸಂಪಾದನೆಯೊಂದಿಗೆ  ಹಿಂದಿರುಗಿದರು. 

ವೆಬ್ದುನಿಯಾವನ್ನು ಓದಿ