ಇನ್ ಸ್ಟಾಗ್ರಾಂನಲ್ಲೇ ನಾನು ಅಮ್ಮನಾಗಬೇಕೆಂದು ಪತಿಗೆ ಬೇಡಿಕೆಯಿಟ್ಟ ನಟಿ!
ಶುಕ್ರವಾರ, 8 ಡಿಸೆಂಬರ್ 2017 (07:51 IST)
ಮುಂಬೈ: ಇತ್ತೀಚೆಗೆ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವೈಯಕ್ತಿಕ ವಿಷಯಗಳನ್ನು ಹಾಕಿಕೊಳ್ಳುವುದು ಏನೂ ಹೊಸದಲ್ಲ. ಆದರೆ ಇಲ್ಲೊಬ್ಬ ನಟಿ ನನ್ನನ್ನು ಅಮ್ಮ ಮಾಡೆಂದು ಪತಿಗೆ ಇನ್ ಸ್ಟಾಗ್ರಾಂನಲ್ಲಿ ಬೇಡಿಕೆಯಿಟ್ಟಿದ್ದಾಳೆ!
ಸ್ಟಾರ್ ಪ್ಲಸ್ ಹಿಂದಿ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ‘ಏ ಹೇ ಮೊಹಬ್ಬತೇ’ ಧಾರವಾಹಿಯಲ್ಲಿ ಶಗುನ್ ಎಂಬ ವಿಲನ್ ಪಾತ್ರ ಮಾಡುತ್ತಿರುವ ಅನಿತಾ ಹಸನಂದಿನಿ ಪತಿ ರೋಹಿತ್ ರೆಡ್ಡಿ ಬಳಿ ಇಂತಹದ್ದೊಂದು ಬೇಡಿಕೆಯಿಟ್ಟಿದ್ದಾಳೆ.
ಮಗುವಿನ ಫೋಟೋ ಪ್ರಕಟಿಸಿದ ಅನಿತಾ, ಪತಿಯನ್ನು ಟ್ಯಾಗ್ ಮಾಡಿದ್ದಲ್ಲದೆ, ರೋಹಿತ್, ಮಕ್ಕಳ ಬಗ್ಗೆ ಆಲೋಚನೆ ಮಾಡೋಣ ಬನ್ನಿ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪತಿ ಕೂಡಾ ಲೈಕ್ ಮಾಡಿದ್ದಾರೆ! ಈ ಪೋಸ್ಟ್ ಇದೀಗ ಭಾರೀ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ