ಜೊತೆ ಜೊತೆಯಲಿ ಧಾರವಾಹಿ ಅಭಿಮಾನಿಗಳಿಂದ ವಾಹಿನಿಗೆ ಮುತ್ತಿಗೆ
ಡಾ. ವಿಷ್ಣುವರ್ಧನ್ ಅಭಿಮಾನಿಗಳು ಮತ್ತು ಅನಿರುದ್ಧ್ ಅಭಿಮಾನಿಗಳ ಗುಂಪು ಜೀ ಕನ್ನಡ ವಾಹಿನಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದೆ.
ಅನಿರುದ್ಧ್ ಅವರನ್ನು ಆರ್ಯವರ್ಧನ್ ಪಾತ್ರಕ್ಕೆ ವಾಪಸ್ ಕರೆಸಿಕೊಳ್ಳಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಇದುವರೆಗೆ ಸೋಷಿಯಲ್ ಮೀಡಿಯಾ ಮೂಲಕ ಬೇಡಿಕೆಯಿಡುತ್ತಿದ್ದ ಅಭಿಮಾನಿಗಳು ಈಗ ತಮ್ಮ ಮನವಿಗೆ ಸ್ಪಂದಿಸದ ಕಾರಣ ನೇರವಾಗಿ ವಾಹಿನಿಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ.