ಬಿಬಿಕೆ 10: ಈ ವಾರ ಮನೆಯಿಂದ ಹೊರಹೋಗುವ ಸ್ಪರ್ಧಿ ಇವರೇನಾ?

ಮಂಗಳವಾರ, 28 ನವೆಂಬರ್ 2023 (11:55 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಮನೆಯಿಂದ ಹೊರಹೋಗುವವರು ಯಾರು ಎಂಬ ಪ್ರಶ್ನೆಗೆ ವೀಕ್ಷಕರಲ್ಲಿ ಒಂದು ಹೆಸರು ಭಾರೀ ಚರ್ಚೆಯಾಗುತ್ತಿದೆ.

ಈ ವಾರ ಮನೆಯಿಂದ ಸ್ನೇಹಿತ್ ಹೊರಹೋಗಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕುತ್ತಿದ್ದಾರೆ. ಮನೆಯ ಸದಸ್ಯರಾದ ಡ್ರೋಣ್ ಪ್ರತಾಪ್, ಸಂತೋಷ್ ಕೂಡಾ ಇದೇ ಅಭಿಪ್ರಾಯದಲ್ಲಿದ್ದಾರೆ.

ಈ ವಾರ ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಎಂಟ್ರಿ ಪಡೆದಿದ್ದಾರೆ. ಅವರೆಂದರೆ ಪವಿ ಪೂವಪ್ಪ ಮತ್ತು ಅವಿನಾಶ್ ಶೆಟ್ಟಿ. ಮನೆಯಿಂದ ಹೊರಹೋಗಲು ನಿನ್ನೆ ವಿನಯ್, ವರ್ತೂರು ಸಂತೋಷ್, ತನಿಷಾ, ಸಂಗೀತಾ, ಪ್ರತಾಪ್, ನಮ್ರತಾ, ಮೈಕಲ್, ಸಂತೋಷ್, ಸಿರಿ ನಾಮಿನೇಟ್ ಆಗಿದ್ದಾರೆ.

ಈ ಪೈಕಿ ಪವಿ ಪೂವಪ್ಪ ಮತ್ತು ಅವಿನಾಶ್ ಗೆ ಒಬ್ಬೊಬ್ಬರನ್ನು ನಾಮಿನೇಷನ್ ನಿಂದ ಸೇವ್ ಮಾಡುವ ಅಧಿಕಾರ ನೀಡಲಾಯ್ತು. ಅದರಂತೆ ಪವಿ ಮತ್ತು ಅವಿನಾಶ್ ಇಬ್ಬರು ಸ್ಪರ್ಧಿಗಳಾದ ಸಿರಿ ಮತ್ತು ತುಕಾಲಿ ಸಂತೋಷ್ ನನ್ನು ಉಳಿಸಿಕೊಂಡಿದ್ದಾರೆ. ಹೀಗಾಗಿ ಈ ವಾರ ಮನೆಯಿಂದ ಹೊರಹೋಗುವುದು ಸ್ನೇಹಿತ್ ಇರಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ