ಬಿಬಿಕೆ 10: ಕಿಚ್ಚನ ಪಂಚಾಯ್ತಿಯಲ್ಲಿ ಸಂಗೀತಾ, ಸ್ನೇಹಿತ್ ಗೆ ಕ್ಲಾಸ್

ಭಾನುವಾರ, 26 ನವೆಂಬರ್ 2023 (07:40 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರ ನಿನ್ನೆಯ ಕಿಚ್ಚನ ಪಂಚಾಯ್ತಿಯಲ್ಲಿ ಸಂಗೀತಾ ಮತ್ತು ಸ್ನೇಹಿತ್ ಗೆ ಸುದೀಪ್ ಚೆನ್ನಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಈ ವಾರ ಇಬ್ಬರೂ ಬೇರೆ ಬೇರೆ ಕಾರಣಗಳಿಗೆ ಸುದ್ದಿಯಾಗಿದ್ದರು. ನಿರೀಕ್ಷೆಯಂತೇ ಇಬ್ಬರನ್ನೂ ಕಿಚ್ಚ ತರಾಟೆಗೆ ತೆಗೆದುಕೊಂಡಿದ್ದಾರೆ. ಆರಂಭದಲ್ಲೇ ಇದೇ ವಿಚಾರವಿಟ್ಟುಕೊಂಡೇ ಇಂದಿನ ಪಂಚಾಯ್ತಿ ಎಂದು ಸುದೀಪ್ ಹೇಳಿದ್ದರು.

ಅದರಂತೆ ಈ ವಾರ ಕಾರ್ತಿಕ್ ರನ್ನು ಬೇಕೆಂದೇ ಟಾರ್ಗೆಟ್ ಮಾಡಿ ಟಾಸ್ಕ್ ನೀಡಿದ್ದ ಸಂಗೀತಾಗೆ ಸುದೀಪ್ ಕ್ಲಾಸ್ ತೆಗೆದುಕೊಂಡರು. ಈ ಮೊದಲು ಸ್ನೇಹಿತೆಯಾಗಿದ್ದರೂ ತಮ್ಮನ್ನು ಉಳಿಸಿಕೊಳ್ಳುವ ಚಾನ್ಸ್ ಇದ್ದರೂ ಉಳಿಸಿಕೊಳ್ಳಲಿಲ್ಲ ಎಂದು ಕಾರ್ತಿಕ್ ಮೇಲೆ ಗೂಬೆ ಕೂರಿಸಿದ್ದ ಸಂಗೀತಾ ಈ ಬಾರಿ ತಾವೇ ಆ ಮಾತು ಮರೆತು ಕಾರ್ತಿಕ್ ರನ್ನು ಟಾರ್ಗೆಟ್ ಮಾಡಿದ್ದರು.

ಇನ್ನು, ಸ್ನೇಹಿತ್ ಬಾತ್ ರೂಂ ಬಳಿ ಡ್ರೋಣ್ ಪ್ರತಾಪ್ ಜೊತೆ ಘರ್ಷಣೆ ಮಾಡಿಕೊಂಡಿದ್ದರು. ವಿನಯ್ ಗಾಗಿ ಬಾತ್ ರೂಂ ಕಾದಿರಿಸಿದ್ದಕ್ಕೆ ಇಬ್ಬರ ನಡುವೆ ಘರ್ಷಣೆಯಾಗಿತ್ತು. ಈ ವಿಚಾರಕ್ಕೆ ಸ್ನೇಹಿತ್ ನಡೆಯನ್ನು ಸುದೀಪ್ ಪ್ರಶ್ನೆ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ