ಬಿಬಿಕೆ 10: 50 ನೇ ದಿನಕ್ಕೆ ಮನೆಗೆ ಎಂಟ್ರಿ ಕೊಟ್ಟ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಯಾರು?

ಸೋಮವಾರ, 27 ನವೆಂಬರ್ 2023 (09:40 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಈಗ 50 ನೇ ದಿನಕ್ಕೆ ಕಾಲಿಟ್ಟಿದೆ. ಇಷ್ಟು ದಿನಕ್ಕೆ ಎಲಿಮಿನೇಟ್ ಆಗಿ ಮನೆಯಿಂದ ಹೊರಹೋದವರನ್ನು ಹೊರತುಪಡಿಸಿ ಉಳಿದ ಸ್ಪರ್ಧಿಗಳು 11.

ನಿನ್ನೆ ನೀತು ಎಲಿಮಿನೇಟ್ ಆಗಿ ಹೊರಹೋಗಿದ್ದಾರೆ. ಅದರ ಬೆನ್ನಲ್ಲೇ ಸ್ಪರ್ಧಿಗಳಿಗೆ ಮತ್ತು ವೀಕ್ಷಕರಿಗೆ ಬಿಗ್ ಬಾಸ್ ಮತ್ತೊಂದು ಸರ್ಪೈಸ್ ಕೊಟ್ಟಿದೆ. ಇದೀಗ ವೈಲ್ಡ್‍ ಕಾರ್ಡ್ ಎಂಟ್ರಿಯಾಗಿ ಇಬ್ಬರು ಸ್ಪರ್ಧಿಗಳು ಮನೆಗೆ ಪ್ರವೇಶ ಮಾಡಿದ್ದಾರೆ.

ಈಗ ಹರಿಯಬಿಡಲಾಗಿರುವ ಪ್ರೋಮೋದಲ್ಲಿ ಆ ಸ್ಪರ್ಧಿಗಳು ಯಾರು ಎಂದು ಮುಖ ಕಾಣಿಸದಂತೆ ತೋರಿಸಲಾಗಿದೆ. ಆ ಇಬ್ಬರು ಸ್ಪರ್ಧಿಗಳಲ್ಲಿ ಒಬ್ಬರು ಮಾಡೆಲ್ ಆಗಿರುವ ಪವಿ ಪೂವಪ್ಪ ಮತ್ತು ಕ್ರಿಕೆಟಿಗ ಅವಿನಾಶ್ ಶೆಟ್ಟಿ.

ಪ್ರತೀ ಬಾರಿ ಬಿಗ್ ಬಾಸ್ ನಲ್ಲಿ ಶೆಟ್ಟಿ ಗ್ಯಾಂಗ್ ಮಿಂಚಿದೆ. ಆದರೆ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಯಾರೂ ಶೆಟ್ಟಿಗಳಿಲ್ಲ ಎಂದು ವೀಕ್ಷಕರು ಕೇಳುತ್ತಲೇ ಇದ್ದರು. ಇದೀಗ ಒಬ್ಬರು ಬಂದಾಯ್ತು. ಈ ಹೊಸ ಸ್ಪರ್ಧಿಗಳು ಮನೆಯಲ್ಲಿ ಮತ್ತಷ್ಟು ಹಲ್ ಚಲ್ ಎಬ್ಬಿಸುತ್ತಾರಾ ಅಥವಾ ಸಿಕ್ಕಿದ ಕಿರು ಅವಧಿಯಲ್ಲಿ ಇತರೆ ಸ್ಪರ್ಧಿಗಳಿಗೆ ಠಕ್ಕರ್ ಕೊಡುತ್ತಾರಾ ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ