ಬಿಬಿಕೆ 10: ಕಾರ್ತಿಕ್ ಗೆ ಹಿಂದಿನಿಂದ ಬತ್ತಿ ಇಡ್ತಿದ್ದಾರಾ ವಿನಯ್?

ಶನಿವಾರ, 25 ನವೆಂಬರ್ 2023 (11:17 IST)
Photo Courtesy: Twitter
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಇತ್ತೀಚೆಗೆ ಭಾರೀ ಸ್ನೇಹಿತರಂತಿದ್ದ ಕಾರ್ತಿಕ್ ಮತ್ತು ವಿನಯ್ ನಡುವೆ ಒಳಗೊಳಗೇ ಮುಸುಕಿನ ಗುದ್ದಾಟವಿದೆ ಎಂಬುದು ಈಗ ಸ್ಪಷ್ಟವಾಗಿದೆ.

ನಿನ್ನೆಯ ಎಪಿಸೋಡ್‍ ನಲ್ಲಿ ವಿನಯ್ ಸಹ ಸ್ಪರ್ಧಿ ಸ್ನೇಹಿತ್ ಜೊತೆ ಕಾರ್ತಿಕ್ ಬಗ್ಗೆ ಹೇಳುತ್ತಿದ್ದರು. ಕಾರ್ತಿಕ್ ನನ್ನು ಬೇಕೆಂದೇ ಉರಿಸಬೇಕು ಎಂದು ವಿನಯ್ ಹೇಳುತ್ತಿದ್ದರು.

ಇದನ್ನು ನೋಡಿ ವೀಕ್ಷಕರು ವಿನಯ್ ಹಿಂದಿನಿಂದ ಒಂದು ರೀತಿ ಮುಂದಿನ ಒಂದು ರೀತಿ ಇದ್ದಾರೆ. ಈ ವಿಡಿಯೋವನ್ನು ಈ ವಾರ ಕಿಚ್ಚ ಸುದೀಪ್ ವಾರಂತ್ಯದಲ್ಲಿ ಎಲ್ಲರ ಎದುರಿಗೆ ಪ್ಲೇ ಮಾಡಬೇಕು. ಆಗಲೇ ವಿನಯ್ ಬಂಡವಾಳ ಗೊತ್ತಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೆಲವು ವಾರದ ಹಿಂದೆ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿ ವಿನಯ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಅದಾದ ಬಳಿಕ ಕಾರ್ತಿಕ್ ಜೊತೆಗಿನ ಅವರ ಒಡನಾಟ ಎಲ್ಲರ ಗಮನ ಸೆಳೆದಿತ್ತು. ಇಬ್ಬರೂ ಸ್ನೇಹಿತರಾಗಿದ್ದಾರೆ ಎಂದುಕೊಳ್ಳುವಾಗಲೇ ವಿನಯ್ ಈ ರೀತಿ ಹಿಂದಿನಿಂದ ಕಾರ್ತಿಕ್ ಬಗ್ಗೆ ಮಾತನಾಡುತ್ತಿರುವುದು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ