ಇಂದು ಬಿಗ್ ಬಾಸ್ ಕನ್ನಡ ಫೈನಲ್: ಗೆದ್ದವರು ಯಾರು ಗೊತ್ತಾ?!

ಭಾನುವಾರ, 2 ಫೆಬ್ರವರಿ 2020 (09:18 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ವಿನ್ನರ್ ಯಾರು ಎಂಬ ತೀರ್ಮಾನ ಇಂದು ಹೊರಬೀಳಲಿದೆ. ಇಂದು ಅಂತಿಮ ಎಪಿಸೋಡ್ ಪ್ರಸಾರವಾಗಲಿದೆ.


ಆದರೆ ಸಾಮಾಜಿಕ ಜಾಲತಾಣಗಳ ಮೂಲಕ ಈ ಬಾರಿಯ ಶೋ ಗೆದ್ದವರು ವಾಸುಕಿ ವೈಭವ್ ಎಂಬ ಸುದ್ದಿ ಹರಿದಾಡುತ್ತಿದೆ. ಅಂತಿಮ ಸುತ್ತಿಗೆ ಶೈನ್ ಶೆಟ್ಟಿ ಮತ್ತು ವಾಸುಕಿ ವೈಭವ್ ಬರಲಿದ್ದು, ಇವರಲ್ಲಿ ವಾಸುಕಿ ಶೋ ಗೆದ್ದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಈಗಲೇ ಕೆಲವರು ಶೈನ್ ಗೆ ಅನ್ಯಾಯ ಮಾಡಿದಿರಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಬಾರಿ ಶೈನ್ ಗೆಲ್ಲಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿದೆ. ನಿಜವಾಗಿಯೂ ಶೋ ಗೆದ್ದವರು ಯಾರು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ