ಲಂಡನ್ ಗೆ ಹೋಗುತ್ತೇನೆಂದ ಜೊತೆ ಜೊತೆಯಲಿ ಆರ್ಯವರ್ಧನ್ ಹೋಗಿದ್ದೆಲ್ಲಿಗೆ ಗೊತ್ತಾ?!
ನಟ ಅನಿರುದ್ಧ್ ಬಿಡುವಿಲ್ಲದ ಚಿತ್ರೀಕರಣದ ನಡುವೆ ತಮಗೆ ಸಿಕ್ಕ ಸಣ್ಣ ವಿರಾಮವನ್ನು ಚೆನ್ನಾಗಿಯೇ ಬಳಸಿಕೊಂಡು ಪತ್ನಿ ಕೀರ್ತಿ ವರ್ಧನ್ ಜತೆಗೆ ಧರ್ಮಸ್ಥಳ ಮಂಜುನಾಥಸ್ವಾಮಿ ದರ್ಶನ ಮಾಡಿದ್ದಾರೆ. ಹಿಂದಿನಿಂದಲೂ ಧರ್ಮಸ್ಥಳಕ್ಕೆ ಆಗಾಗ ಭೇಟಿ ನೀಡುತ್ತಲೇ ಇದ್ದ ಅನಿರುದ್ಧ್ ಈಗ ಧಾರವಾಹಿಯಿಂದಾಗಿ ತಮಗೆ ಸಿಕ್ಕ ಯಶಸ್ಸಿಗೆ ದೇವರಿಗೆ ಪೂಜೆ ಸಲ್ಲಿಸಲು ತೆರಳಿದ್ದಾರೆ.