ಬಿಗ್ ಬಾಸ್ ಕನ್ನಡ: ಈ ವಾರ ಮತ್ತೆ ಟಾರ್ಗೆಟ್ ಆದರಾ ಚಂದನ್ ಆಚಾರ್?
ಈ ಬಗ್ಗೆ ವೀಕ್ಷಕರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಬೇಕೆಂದೇ ಚಂದನ್ ಆಚಾರ್ ರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ವಾರ ಸುಜಾತ ಮನೆಯಿಂದ ಹೊರಹೋಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಯಾರು ಉಳಿಯುತ್ತಾರೆ, ಯಾರು ಹೊರ ಹೋಗುತ್ತಾರೆ ಎನ್ನುವುದನ್ನು ನೋಡಲು ವಾರಂತ್ಯದವರೆಗೆ ಕಾಯಲೇಬೇಕು.