ಮಹಿಳೆಗೆ ಅಶ್ಲೀಲ ಫೋಟೋ ಕಳುಹಿಸಿ ಅರೆಸ್ಟ್ ಆದ ಬಿಗ್ ಬಾಸ್ ಹಿಂದಿ ಸ್ಪರ್ಧಿ ಅಝಾಜ್ ಖಾನ್
ಸೋಮವಾರ, 21 ನವೆಂಬರ್ 2016 (10:31 IST)
ಮುಂಬೈ: ಬಿಗ್ ಬಾಸ್ ಹಿಂದಿ ಅವತರಣಿಕೆಯ ಸ್ಪರ್ಧಿಯಾಗಿದ್ದ ಹಿಂದಿ ಕಿರುತೆರೆ ನಟ ಅಝಾಜ್ ಖಾನ್ ಮಹಿಳೆಯೊಬ್ಬರಿಗೆ ಅಶ್ಲೀಲ ಫೋಟೋ ವ್ಯಾಟ್ಸ್ ಅಪ್ ಮಾಡಿದ ಆರೋಪದಲ್ಲಿ ಬಂಧಿತರಾಗಿದ್ದಾರೆ.
ಕೇಶ ವಿನ್ಯಾಸ ಮಾಡುವ ಮಹಿಳೆಯೊಬ್ಬರಿಗೆ ಅಶ್ಲೀಲ ಫೋಟೋ ಕಳುಹಿಸದ್ದಲ್ಲದೆ ಅವಾಚ್ಯವಾಗಿ ಮಾತನಾಡಿದ್ದರು ಎಂಬ ದೂರಿನನ್ವಯ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ತಮ್ಮ ವ್ಯವಹಾರಕ್ಕೆ ಬಂಡವಾಳ ಹೂಡಿಕೆದಾರರನ್ನು ಹುಡುಕುತ್ತಿದ್ದಾಗ ಮಹಿಳೆಗೆ ಫೇಸ್ ಬುಕ್ ನಲ್ಲಿ ಆಝಾಜ್ ಪರಿಚಯವಾಗಿತ್ತಂತೆ. ಹೀಗೇ ಅವರ ನಡುವೆ ಮಾತುಕತೆ ನಡೆದು ವ್ಯವಹಾರದಲ್ಲಿ ಕೈ ಜೋಡಿಸಲು ಆಝಾಜ್ ಒಪ್ಪಿಕೊಂಡಿದ್ದರಂತೆ. ಆದರೆ ಅವರನ್ನು ವ್ಯಾಟ್ಸ್ ಅಪ್ ಮೂಲಕ ಸಂಪರ್ಕಿಸಿದಾಗ ಅಝಾಜ್ ತಮ್ಮ ಅಶ್ಲೀಲ ಖಾಸಗಿ ಫೋಟೋಗಳನ್ನು ಕಳುಹಿಸಿದ್ದರು ಮತ್ತು ಈ ಬಗ್ಗೆ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎಂದು ಮಹಿಳೆ ದೂರಿದ್ದರು.
ಆದರೆ ಇದೆಲ್ಲಾ ತಮ್ಮ ಹೆಸರು ಹಾಳು ಮಾಡಲು ಮಾಡಿದ ತಂತ್ರ. ನನ್ನದೇನೂ ತಪ್ಪಿಲ್ಲ ಎಂದು ಅಝಾಜ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ