ಪಾಕಿಸ್ತಾನಕ್ಕೆ ನೆರವಾಗಲು ಸೂಚಿಸಿ ಟೀಕೆಗೊಳಗಾದ ಯುವರಾಜ್ ಸಿಂಗ್, ಹರ್ಭಜನ್

ಬುಧವಾರ, 1 ಏಪ್ರಿಲ್ 2020 (10:56 IST)
ಮುಂಬೈ: ಕೊರೋನಾ ಪೀಡಿತ ಪಾಕಿಸ್ತಾನಿಯರಿಗೆ ನೆರವಾಗಲು ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಆರಂಭಿಸಿರುವ ಚ್ಯಾರಿಟಿಗೆ ಸಹಾಯ ಮಾಡುವಂತೆ ಮನವಿ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಈಗ ಭಾರೀ ಟೀಕೆಗೊಳಗಾಗಿದ್ದಾರೆ.


ಸದಾ ಭಾರತದ ವಿರುದ್ಧ ಉಗ್ರರನ್ನು ಛೂ ಬಿಡುವ ಪಾಕ್ ಗೆ ನೆರವಾಗಲು ಪರೋಕ್ಷವಾಗಿ ಸೂಚಿಸಿದ್ದಕ್ಕೆ ಯುವಿ ಮತ್ತು ಭಜಿ ವಿರುದ್ಧ ಕಿಡಿ ಕಾರಿರುವ ಟ್ವಿಟರಿಗರು ನಿಮಗೆ ನಾಚಿಕೆಯಾಗಬೇಕು ಎಂದಿದ್ದಾರೆ.

ಪಾಕಿಸ್ತಾನಕ್ಕೆ ನೆರವಾಗಲು ಸೂಚಿಸುವ ಮೂಲಕ ಯುವಿ, ಭಜಿ ತಮ್ಮ ನಿಜ ರೂಪ ತೋರಿಸಿದ್ದಾರೆ ಎಂದು ಕೆಲವರು ಟೀಕಿಸಿದರೆ ಮತ್ತೆ ಕೆಲವರು ನಿಮ್ಮ ದೇಶಕ್ಕೇ ದ್ರೋಹ ಬಗೆಯುವವರಿಗೆ ಸಹಾಯ ಮಾಡಿ ಎನ್ನಲು ನಿಮಗೆ ನಾಚಿಕೆಯಾಗಲ್ವಾ ಎಂದು ತಪರಾಕಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ