ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಡಿಕೆಶಿ ಬರೋದು ಪಕ್ಕಾ

ಗುರುವಾರ, 1 ಜೂನ್ 2023 (16:43 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕ, ಹಾಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅತಿಥಿಯಾಗಿ ಬರಲಿದ್ದಾರೆ ಎಂಬ ಸುದ್ದಿ ಎರಡು ದಿನಗಳಿಂದ ಹಬ್ಬಿದೆ. ಇದು ಕನ್ ಫರ್ಮ್ ಆಗಿದೆ.

ಡಿಕೆಶಿ ವೀಕೆಂಡ್ ವಿತ್ ಕಾರ್ಯಕ್ರಮಕ್ಕೆ ಬರುವುದು ಖಚಿತ. ಆದರೆ ಈ ವಾರ ಅಲ್ಲ. ಮುಂದಿನ ವಾರ ಅವರ ಎಪಿಸೋಡ್ ಪ್ರಸಾರವಾಗಲಿದೆ. ಪೂರ್ವ ನಿಗದಿತ ಕಾರ್ಯಕ್ರಮಗಳ ಕಾರಣ ಡಿಕೆಶಿಗೆ  ಈ ವಾರ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಭಾನುವಾರ ಶೂಟಿಂಗ್ ನಡೆಯಲಿದ್ದು, ಮುಂದಿನ ವಾರ ಅವರ ಎಪಿಸೋಡ್ ಪ್ರಸಾರವಾಗಲಿದೆ ಎನ್ನಲಾಗಿದೆ.

ಡಿಕೆ ಶಿವಕುಮಾರ್ ಸಾಧಕರ ಖುರ್ಚಿಯಲ್ಲಿ ಕೂರಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದ್ದಂತೇ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜಕೀಯ ನಾಯಕರನ್ನು ಕರೆಸುತ್ತಿರುವುದಕ್ಕೆ ಅಪಸ್ವರವೂ ಕೇಳಿಬಂದಿದೆ. ಆದರೆ ಈ ಹಿಂದೆ ಈ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಸಿದ್ದರಾಮಯ್ಯ ಮುಂತಾದ ನಾಯಕರು ಆಗಮಿಸಿದ್ದಾರೆ. ಹೀಗಾಗಿ ಈಗ ಕಾಂಗ್ರೆಸ್ ನ ಟ್ರಬಲ್
ಶೂಟರ್ ಎಂದೇ ಜನಪ್ರಿಯರಾಗಿರುವ ಡಿಕೆಶಿ ಜೀವನಕತೆಯನ್ನೂ ಜನರ ಮುಂದಿಡಲು ವಾಹಿನಿ ಸಿದ್ಧವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ