ನೀರಾವರಿ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್..!

ಮಂಗಳವಾರ, 30 ಮೇ 2023 (19:55 IST)
ಕಾಂಗ್ರೆಸ್ ಸರ್ಕಾರ ರಚನೆಯಾಗಿ ಸಚಿವ ಸಂಪುಟ ರಚನೆಯಾದ ವಾರಂತ್ಯದಲ್ಲೇ ಸಚಿವರೆಲ್ಲಾ ಫುಲ್ ಬ್ಯುಸಿಯಾಗಿದ್ದಾರೆ. ಒಂದು ಕಡೆ ಸಿಎಂ ಸಿದ್ದರಾಮಯ್ಯ ಗ್ಯಾರಂಟಿ ಯೋಜನೆಗಳನ್ನ ಜಾರಿಗೆ ತರೋದಕ್ಕೆ ಮೀಟಿಂಟ್ ನಲ್ಲಿ ಬ್ಯುಸಿಯಾಗಿದ್ರೆ, ಮತ್ತೊಂದು ಕಡೆ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸಭೆ ಮೇಲೆ ಸಭೆ ಮಾಡ್ತಿದ್ದಾರೆ. ಇವತ್ತು ಜಲಸಂಪನ್ಮೂಲ ಸಚಿವರಾದ ಬಳಿಕ  ನೀರಾವರಿ ಅಧಿಕಾರಿಗಳೊಂದಿಗೆ ಮೊದಲ ಸಭೆ ನಡೆಸಿದ್ರು.

ರಾಜ್ಯ ಸರ್ಕಾರದ ಸಿಎಂ ಡಿಸಿಎಂ ಹಾಗೂ ಸಚಿವರು ಫುಲ್ ಆಕ್ಟಿವ್ ಅಗಿ ಸಭೆ ಮೇಲೆ ಸಭೆ ಮಾಡ್ತಿದ್ದಾರೆ. ಇವತ್ತು  ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ  ವಿಕಾಸಸೌದಲ್ಲಿ ಸಭೆ ನಡೆಸಿ ಅಧಿಕಾರಿಗಳಿಗೆ ಕೆಲವು ಸೂಚನೆಗಳನ್ನ ನೀಡಿದ್ರು.ಸಭೆ ಆರಂಭಕ್ಕೂ ಮುನ್ನ ಯಾವುದೇ ವಿಡಿಯೋ ಆಡಿಯೋ ಮಾಡೋದು, ಅದನ್ನ ವೈರಲ್ ಮಾಡೋದು, ಮಾಧ್ಯಮಗಳಿಗೆ ಕೊಡೋದು ಇದನ್ನೆಲ್ಲಾ ಮಾಡಬೇಡಿ, ನನಗೆ ಎಲ್ಲಾ ಮಿಷನ್ ಫಂಕ್ಷನ್ ಹೇಗೆ ವರ್ಕ್ ಆಗುತ್ತೆ ಅನ್ನೋದು ಗೊತ್ತಿದೆ.ಯಾರೇ ಆಗಿರಲಿ, ನನ್ನ ಟೀಂ ಆಗಿರಲಿ ಅಥವಾ ಅಧಿಕಾರಿಗಳಾಗಿರಲಿ ಯಾರು ಮಾಡಬಾರದು ಅಂತ  ಹೇ ಯಾರಾದ್ರೂ ವಿಡಿಯೋ ಮಾಡ್ತಾರಾ ಅಂತ ನೋಡಿ ಎಂದು ಗನ್ ಮ್ಯಾನ್ ಗಳಿಗೆ ತಮ್ಮದೇ ಆದ ಶೈಲಿಯಲ್ಲಿ ಸೂಚನೆ ಕೊಟ್ರು ಡಿಸಿಎಂ

ಸಭೆಯಲಿ ಕೇಂದ್ರದಿಂದ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಅನುಮತಿ ತರುವುದೇ ನಾನು ನಿಮಗೆ ನೀಡುತ್ತಿರುವ ಗುರಿ. ಮೇಕೆದಾಟು, ಮಹದಾಯಿ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಬೇಕು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಿ.ಜಲವಿವಾದ ಪರಿಹಾರ, ಬಾಕಿ ಯೋಜನೆಗಳ ಪೂರ್ಣ, ನೀರಾವರಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣ, ಕೇಂದ್ರದಿಂದ ಅನುದಾನ ತರುವುದು, ಉದ್ಯೋಗ ಸೃಷ್ಟಿಗೆ ಒತ್ತು ಕೊಡಬೇಕು. ನೀರಾವರಿ ಯೋಜನೆಗಳಿಗೆ 5 ವರ್ಷದಲ್ಲಿ 2 ಲಕ್ಷ ಕೋಟಿ ರು ವಿನಿಯೋಗಿಸುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಸರಕಾರ, ಸಂಸ್ಥೆಗಳು, ಕೇಂದ್ರದ ಅನುದಾನದ ಮೂಲಕ ಸಂಪನ್ಮೂಲ ಒಟ್ಟುಗೂಡಿಸಬೇಕಿದೆ ಅಂತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ರು.

ಇನ್ನೂ ಸಭೆ ಬಳಿಕ ಮಾತನಾಡಿದ ಡಿಕೆಶಿ... ಇಂದು ಜಲ ಸಂಪನ್ಮೂಲ ಇಲಾಖೆ ಮೊದಲ ಸಭೆ ಮಾಡಲಾಗಿದೆ. ಈ ಹಿಂದೆ ಒಂದೂವರೆ ವರ್ಷ ಈ ಇಲಾಖೆ ನಿಭಾಯಿಸಿದ್ದೆ, ಸ್ವಲ್ಪ ಅನುಭವ ಇದೆ.ಜನರಿಗೆ ನಾವು ಈಗಾಗಲೇ ಮಾತು ಕೊಟ್ಟಿದ್ದೇವೆ.ನೀರಾವರಿಗೆ ಹೆಚ್ಚು ಆದ್ಯತೆ ಕೊಡ್ತೀವಿ ಅಂತ ಹೇಳಿದ್ವಿ, ಅದರ ಅರಿವಿದೆ ನಮ್ಮ ರಾಜ್ಯದಲ್ಲಿ 26 ಜನ ಎಂಪಿ ಗಳು ಇದ್ದಾರೆ, ಅವರ ಮೂಲಕ ಕೇಂದ್ರಕ್ಕೆ ಒತ್ತಡ ಹಾಕಿಸುವ ಮೂಲಕ ಕೇಂದ್ರದಲ್ಲಿ ಹಣ ತರುವ ಕೆಲಸ ಮಾಡಬೇಕು. ಅಪ್ಪರ್ ಭದ್ರ ಈಗಾಗಲೇ ಕೇಂದ್ರ ಯೋಜನೆ ಅಂತ ಆಗಿದೆ ಅದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕ್ವಾಲಿಟಿ ವಿಚಾರದಲ್ಲಿ ಯಾವುದೇ ಕಾಂಪ್ರಮೈಸ್ ಇಲ್ಲ ಅಂತ ಪರೋಕ್ಷವಾಗಿ ಎಚ್ಚರಿಕೆಯನ್ನ ನೀಡಿದ್ರು ಡಿಸಿಎಂ ಡಿಕೆ ಶಿವಕುಮಾರ್.

ಒಟ್ನಲ್ಲಿ ಕಾಂಗ್ರೆಸ್ ಸರ್ಕಾರದ ಸಚಿವರು ಕೊಟ್ಟ ಮಾತಾನ್ನ ಉಳಿಸಿಕೊಳ್ಳಬೇಕು ನುಡಿದಂತೆ ನಡೆಯಬೇಕು ಜನರ ವಿಶ್ವಾಸ ಉಳಿಸಿಕೊಳ್ಳಬೇಕಂತ ಆಢಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದ್ದಾರೆ. ನೀರಾವರಿ ಇಲಾಖೆಗಳ ಬಗ್ಗೆ ಮಾಹಿತಿ ಪಡೆದಿರುವ ಡಿಸಿಎಮ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಮುಂದೆ ಸಾಲು ಸಾಲು ಸವಾಲಿಗಳಿವೆ. ಇನ್ನೂ ಮೇಕೆದಾಟು ಅಸ್ತ್ರವನ್ನಾಗಿ ಮಾಡಿಕೊಂಡಿದ್ದ ಡಿಕೆಶಿವಕುಮಾರ್ ಯಶಸ್ವಿಯಾಗಿದ್ರು ಸದ್ಯ ಅಧಿಕಾರದಲ್ಲಿದ್ದು ಆ ಯೋಜನೆಯನ್ನ ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ಮಾಡ್ತಾರೆ ನೀರಾವರಿ ಯೋಜನೆಗಳಿಗೆ ಇರುವ ಅಡೆತಡೆಗಳನ್ನ ಯಾವ ರೀತಿ ಬಗೆಹರಿಸ್ತಾರೆ ಅನ್ನೋದನ್ನ ಕಾದುನೋಡಬೇಕಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ