ಇಂದಿನಿಂದ ಜೀ ವಾಹಿನಿಯಲ್ಲಿ ಡಿಕೆಡಿ, ಕಾಮಿಡಿ ಕಿಲಾಡಿಗಳು ಮಹಾಸಂಚಿಕೆ

ಶನಿವಾರ, 12 ಅಕ್ಟೋಬರ್ 2019 (09:36 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಕಾಮಿಡಿ ಕಿಲಾಡಿಗಳು ಮತ್ತು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಮಹಾ ಸಂಚಿಕೆ ಪ್ರಸಾರವಾಗಲಿದೆ.


ಎರಡೂ ಜನಪ್ರಿಯ ಶೋಗಳ ಮಹಾಸಂಗಮ ವಿಶೇಷ ಕಾರ್ಯಕ್ರಮ ಇಂದು ನಾಳೆ ಪ್ರಸಾರವಾಗಲಿದೆ. ಈಗಾಗಲೇ ಎರಡೂ ಶೋಗಳು ವೀಕ್ಷಕರ ಮನಸೆಳೆದಿದ್ದು ಎರಡೂ ಶೋಗಳೂ ಜತೆಯಾಗಿ ಬರುತ್ತಿರುವುದು ವೀಕ್ಷಕರಿಗೆ ಹಬ್ಬವಾಗಲಿದೆ.

ಡಿಕೆಡಿ ಮತ್ತು ಕಾಮಿಡಿ ಕಿಲಾಡಿಗಳು ಶೋ ಎರಡರಲ್ಲೂ ರಕ್ಷಿತಾ ಪ್ರೇಮ್ ತೀರ್ಪುಗಾರರಾಗಿದ್ದು, ಈ ಎರಡೂ ಸಂಚಿಕೆಗಳ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ