ಈ ವಾರಂತ್ಯದಲ್ಲಿ ಟಿವಿ ವೀಕ್ಷಕರು ಹಬ್ಬ ಮಾಡಲು ಈ ಕಾರಣಗಳೇ ಸಾಕು!

ಶುಕ್ರವಾರ, 11 ಅಕ್ಟೋಬರ್ 2019 (09:30 IST)
ಬೆಂಗಳೂರು: ಈ ವಾರಂತ್ಯದಲ್ಲಿ ಟಿವಿ ವೀಕ್ಷಕರು ಖುಷಿಪಡಲು ಸಾಕಷ್ಟು ಕಾರಣಗಳಿವೆ. ಕಲರ್ಸ್ ವಾಹಿನಿ ಮತ್ತು ಜೀ ಕನ್ನಡ ವಾಹಿನಿಯಲ್ಲಿ ಈ ವಾರ  ಅತ್ಯುತ್ತಮ ಕಾರ್ಯಕ್ರಮಗಳು ಪ್ರಸಾರವಾಗುತ್ತಿದೆ.


ಕಲರ್ಸ್ ವಾಹಿನಿಯಲ್ಲಿ ಈ ವಾರದಿಂದ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗುತ್ತಿದ್ದು, ಅದರ ಉದ್ಘಾಟನಾ ಕಾರ್ಯಕ್ರಮ ಇದೇ ವಾರಂತ್ಯದಲ್ಲಿ ನಡೆಯಲಿದೆ.

ಇನ್ನು, ಜೀ ಕನ್ನಡ ವಾಹಿನಿ ಕಂಠೀರವ ಇಂಡೋರ್ ಸ್ಟೇಡಿಯಂನಲ್ಲಿ ಜೀ ಕುಟುಂಬ  ಅವಾರ್ಡ್ಸ್ ಸಮಾರಂಭ ಆಯೋಜಿಸುತ್ತಿದೆ. ಆ ಕಾರ್ಯಕ್ರಮವನ್ನು ನೇರವಾಗಿ ವೀಕ್ಷಿಸಲು ವೀಕ್ಷಕರಿಗೆ ಅವಕಾಶ ಮಾಡಿಕೊಟ್ಟಿದೆ. ಜತೆಗೆ ಜೀ ವಾಹಿನಿಯಲ್ಲಿ ಈ ವಾರ ನಾಮಿನೇಷನ್ ಪಾರ್ಟಿ ಪ್ರಸಾರವಾಗುತ್ತಿದೆ. ಹೀಗಾಗಿ ಪ್ರೇಕ್ಷಕರಿಗೆ ಹಬ್ಬವೋ ಹಬ್ಬವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ