ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ಸಾಲು ಸಾಲು ಡಬ್ಬಿಂಗ್ ಧಾರವಾಹಿಗಳು ಕನ್ನಡ ಕಿರುತೆರೆಗೆ ಬಂದಿದ್ದವು. ಇದರಿಂದಾಗಿ ಅನೇಕ ಕನ್ನಡ ಮೂಲದ ಧಾರವಾಹಿಗಳು ಅರ್ಧಕ್ಕೇ ಮುಕ್ತಾಯಗೊಂಡಿದ್ದವು.
ಆದರೆ ಬೇರೆ ಭಾಷೆಯಲ್ಲಿ ಜನಪ್ರಿಯವಾಗಿದ್ದ ಧಾರವಾಹಿಗಳನ್ನು ಕನ್ನಡಕ್ಕೆ ಡಬ್ ಮಾಡಿ ಇಲ್ಲಿ ಪಾಪ್ಯುಲರ್ ಮಾಡುವ ವಾಹಿನಿಗಳ ಪ್ಲ್ಯಾನ್ ವರ್ಕೌಟ್ ಆಗಿಲ್ಲ. ಕೇವಲ ಪೌರಾಣಿಕ ಧಾರವಾಹಿ ಮಾತ್ರ ತಕ್ಕಮಟ್ಟಿಗೆ ಯಶಸ್ವಿಯಾಗಿದೆ. ಅದರ ಹೊರತಾಗಿ ಸಾಂಸಾರಿಕ ಧಾರವಾಹಿಗಳು ಸದ್ದಿಲ್ಲದೇ ಬಂದಷ್ಟೇ ವೇಗವಾಗಿ ಪ್ರಸಾರ ನಿಲ್ಲಿಸುತ್ತಿವೆ. ವಿಶೇಷವೆಂದರೆ ಡಬ್ಬಿಂಗ್ ಸಿನಿಮಾವೂ ವ್ಯೂ ಪಡೆದುಕೊಳ್ಳುತ್ತಿದೆ. ಆದರೆ ಡಬ್ಬಿಂಗ್ ಧಾರವಾಹಿಗಳನ್ನು ಮಾತ್ರ ಕನ್ನಡ ಪ್ರೇಕ್ಷಕರು ಅಷ್ಟಾಗಿ ಸ್ವೀಕರಿಸಿಲ್ಲ.