ಈ ವಾರದ ಮಜಾ ಟಾಕೀಸ್ ಈ ಕಾರಣಕ್ಕೆ ನೋಡಲೇಬೇಕು!

ಮಂಗಳವಾರ, 15 ಜನವರಿ 2019 (09:10 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೃಜನ್ ಲೋಕೇಶ್ ನಡೆಸಿಕೊಡುವ ಮಜಾ ಟಾಕೀಸ್ ಗೆ ಈ ವಾರ ವಿಶೇಷ ಅತಿಥಿಯೊಬ್ಬರ ಆಗಮನವಾಗಿದೆ.


ಪ್ರತೀ ವಾರ ಒಂದೊಂದು ಸಿನಿಮಾ ತಂಡದ ಸದಸ್ಯರನ್ನು ಕರೆಸಿ ಮಜಾ ಮಾಡುತ್ತಾ ತಮಾಷೆಯಾಗಿ ಪ್ರೇಕ್ಷಕರನ್ನು ರಂಜಿಸುವ ಸೃಜನ್ ಈ ಬಾರಿ ತಮ್ಮ ಶೋಗೆ ಬಾಲಿವುಡ್ ನ ಹಾಸ್ಯ ನಟ ಜಾನಿ ಲಿವರ್ ಅವರನ್ನು ಕರೆಸಿಕೊಂಡಿದ್ದಾರೆ.

‘ಗರ’ ತಂಡದ ಜತೆಗೆ ಜಾನಿ ಲಿವರ್ ಕೂಡಾ ಮಜಾ ಟಾಕೀಸ್ ನಲ್ಲಿರಲಿದ್ದಾರೆ. ಈ ಚಿತ್ರದಲ್ಲಿ ಜಾನಿ ಲಿವರ್ ಕೂಡಾ ಅಭಿನಯಿಸಿದ್ದರು. ಹೀಗಾಗಿ ಈ ತಂಡದ ಜತೆಗೆ ಮಜಾ ಟಾಕೀಸ್ ಮನೆಗೆ ಜಾನಿ ಲಿವರ್ ಆಗಮಿಸಿದ್ದಾರೆ. ಈ ಎಪಿಸೋಡ್ ನ  ಚಿತ್ರೀಕರಣ ಈಗಾಗಲೇ ಮುಗಿದಿದ್ದು ಈ ವಾರಂತ್ಯಕ್ಕೆ ಪ್ರಸಾರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ