ಇಂದಿನಿಂದ ಜೀ ಕನ್ನಡದಲ್ಲಿ ಎರಡು ಹೊಸ ಶೋ ಶುರು

ಶನಿವಾರ, 18 ಜನವರಿ 2020 (09:41 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಇಂದಿನಿಂದ ಹೊಸ ಎರಡು ಶೋ ಆರಂಭವಾಗುತ್ತಿದೆ. ಜೀನ್ಸ್ ಎಂಬ ಗೇಮ್ ಶೋ ಮತ್ತು ಸರಿಗಮಪ ಸೀಸನ್ 17 ಗೆ ಇಂದು ಚಾಲನೆ ಸಿಗಲಿದೆ.


ಇಂದಿನಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6.30 ಕ್ಕೆ ಜೀನ್ಸ್ ಎಂಬ ಗೇಮ್ ಶೋವನ್ನು ಹಿರಿಯ ನಿರೂಪಕಿ ಸುಷ್ಮಾ ರಾವ್ ನಡೆಸಿಕೊಡಲಿದ್ದಾರೆ.

ಇನ್ನು, ರಾತ್ರಿ 7.30 ರಿಂದ ಜನಪ್ರಿಯ ಸಿಂಗಿಂಗ್ ಶೋ ಸರಿಗಮಪ ಸೀಸನ್ 17 ಆರಂಭವಾಗಲಿದೆ. ಇಂದು ಮತ್ತು ನಾಳೆ ಓಪನಿಂಗ್ ಕಾರ್ಯಕ್ರಮ ನಡೆಯಲಿದ್ದು, ಅಂತಿಮ ಸ್ಪರ್ಧಿಗಳ ಆಯ್ಕೆ ನಡೆಯಲಿದೆ. ಇದಾದ ಬಳಿಕ ಮುಂದಿನ ವಾರದಿಂದ ನಿಜವಾದ ಸ್ಪರ್ಧೆ ಶುರುವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ